ಆಲೂರು: ಪಾಳ್ಯ ಗ್ರಾಮಕ್ಕೆ ಸಾರಿಗೆ ಬಸ್ ಗಳು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಸ್ ವೊಂದನ್ನು ತಡೆದು ಆಕ್ರೋಷ ವ್ತಕ್ತಪಡಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಪಾಳ್ಯ ಗ್ರಾಮದೊಳಗೆ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಬಾರದೆ ನೇರವಾಗಿ ಚತುಷ್ಫಥ ರಸ್ತೆ ಮೂಲಕ ಹೋಗುವುದರಿಂದ ಗ್ರಾಮಸ್ಥರು ಗ್ರಾಮಕ್ಕೆ ಹೋಗಲು ಹರಸಾಹಸ ಮಾಡಬೇಕಾಗಿದೆ.ಸಕಲೇಶಪುರ ಹಾಸನದ ಮಧ್ಯೆ ಪಾಳ್ಯ ಗ್ರಾಮವಿದ್ದು ಗ್ರಾಮಸ್ಥರು ಕೆಲಸ ಕಾರ್ಯಗಳಿಗಾಗಿ ಸಕಲೇಶಪುರ ಹಾಸನವನ್ಜು ಆಶ್ರಯಿಸಿದ್ದು ಎರಡು ಕಡೆಯಿಂದ ಹೋಗುವ ಬಸ್ ಗಳು ಪಾಳ್ಯ ಗ್ರಾಮಕ್ಕೆ ಹೋಗದೆ ಚತುಷ್ಪಥ ರಸ್ತೆ ಮೂಲಕ ಹೋಗುತ್ತಿದೆ. ಇದರಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಗ್ರಾಮದ ಮುಖಾಂತರ ಬಾರದ ಬಸ್ ವೊಂದನ್ನು ರಘು ಪಾಳ್ಯ ,ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿ ಹಾಗೂ ಪಾಳ್ಯ ಹೋಬಳಿ ಅಧ್ಯಕ್ಷರಾದ ವೆಂಕಟೇಶ್,ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬಸ್ ಅಡ್ಡ ಹಾಕಿ ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ.