Monday, November 25, 2024
Homeಸುದ್ದಿಗಳುಸಕಲೇಶಪುರಭಯ ತೊಲಗಿಸಲು "ತೆರೆದ ಮನೆ" ಸಹಕಾರಿ- ASP ಎಚ್. ಎನ್ ಮಿಥುನ್

ಭಯ ತೊಲಗಿಸಲು “ತೆರೆದ ಮನೆ” ಸಹಕಾರಿ- ASP ಎಚ್. ಎನ್ ಮಿಥುನ್

ಭಯ ತೊಲಗಿಸಲು “ತೆರೆದ ಮನೆ” ಸಹಕಾರಿ-
ASP ಎಚ್. ಎನ್ ಮಿಥುನ್

ಸಕಲೇಶಪುರ : ಮಕ್ಕಳಲ್ಲಿನ ಭಯ ತೊಲಗಿಸಲು ತೆರೆದ ಮನೆ ಕಾರ್ಯಕ್ರಮ ಸಹಕಾರಿ’ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಹಾಯಕ ಪೊಲೀಸ್ ವರಿಷ್ಟಧಿಕಾರಿ ಎಚ್. ಎನ್ ಮಿಥುನ್ ಹೇಳಿದರು.

ಸೋಮವಾರ ಪಟ್ಟಣದ ಸಂತ ಜೋಸೆಫ್ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಏರ್ಪಡಿಸಲಾಗಿದ್ದ ಕಾನೂನು ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳು ಪೊಲೀಸ್‍ ಇಲಾಖೆಗೆ ಸತ್ಯ ಮತ್ತು ಕಾನೂನಾತ್ಮಕ ವಿಷಯಗಳನ್ನು ತಿಳಿಸಲು ಆತ್ಮಸ್ಥೈರ್ಯ ತಂದುಕೊಳ್ಳಬೇಕು. ಸಮಾಜ ಸುಧಾರಣೆಯಲ್ಲಿ ತಮ್ಮದೂ ಮಹತ್ವದ ಪಾತ್ರವಿದೆ’
ಕೆಲ ವರ್ಷಗಳಿಂದ ಠಾಣಾ ವ್ಯಾಪ್ತಿಯ ಶಾಲಾ–ಕಾಲೇಜು ಮಕ್ಕಳನ್ನು ಠಾಣೆಗಳಿಗೆ ಕರೆಯಿಸಿ ಪೊಲೀಸ್‍ ಇಲಾಖೆಯ ಕಾರ್ಯವೈಖರಿ, ಬಂದೂಕು, ಗನ್‍ ಬಳಕೆ, ಇಲಾಖೆ ಕುರಿತು ಹೊಂದಿರುವ ತಪ್ಪು ತಿಳವಳಿಕೆ ಸೇರಿ ಧನಾತ್ಮಕ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತಿತ್ತು ಅಂತ ಯೋಜನೆಯನ್ನು ತಾಲೂಕಿನಲ್ಲಿ ಅಳವಡಿಸಿ ಮಕ್ಕಳಲ್ಲಿ ಜಾಗ್ರತಿ ಮೂಡಿಸಲಾಗುವುದು ಎಂದರು.

RELATED ARTICLES
- Advertisment -spot_img

Most Popular