Sunday, April 13, 2025
Homeಸುದ್ದಿಗಳುಸಕಲೇಶಪುರವಿಶ್ವಕರ್ಮ ಸಮಾಜಕ್ಕೆ ಒಂದು ಎಕರೆ ಭೂಮಿ ಮೀಸಲು | ಶಾಸಕ ಎಚ್. ಕೆ ಕುಮಾರಸ್ವಾಮಿ ಭರವಸೆ

ವಿಶ್ವಕರ್ಮ ಸಮಾಜಕ್ಕೆ ಒಂದು ಎಕರೆ ಭೂಮಿ ಮೀಸಲು | ಶಾಸಕ ಎಚ್. ಕೆ ಕುಮಾರಸ್ವಾಮಿ ಭರವಸೆ

ಸಕಲೇಶಪುರ :- ತಾಲೂಕಿನ ವಿಶ್ವಕರ್ಮ ಸಮಾಜಕ್ಕೆ ಪಟ್ಟಣದ ಸಮೀಪವಿರುವ ಹೊರ ವಲಯದಲ್ಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಎಕರೆ ಭೂಮಿಯನ್ನು ಸರ್ಕಾರದಿಂದ ನೀಡಲಾಗುವುದು ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಭರವಸೆ ನೀಡಿದರು.

 

ಇಂದು ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಮಹೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿ ಈಗಾಗಲೇ ಜಾಗವನ್ನು ಗುರುತಿಸಿದ್ದು ಇನ್ನೊಂದು ವಾರದಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳಿಸಿಕೊಡಲಾಗುವುದು ಎಂದರು.

ಮುಂದಿನ ವರ್ಷದ ವಿಶ್ವಕರ್ಮ ಜಯಂತಿ ಒಳಗೆ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿರಲಿ ಎಂದು ಆಶಿಸಿದರು.

RELATED ARTICLES
- Advertisment -spot_img

Most Popular