ಸಕಲೇಶಪುರ:ಪಟ್ಟಣದ ಒಲಂಪಸ್ ಶಾಲೆಯಲ್ಲಿ ಆಯೊಜಿಸಿದ್ದ 12 ದಿನಗಳ ಬೇಸಿಗೆ ಶಿಬಿರ ಗುರುವಾರ ಮುಕ್ತಾಯವಾಯಿತು.
ಶಿಬಿರದ ಬಗ್ಗೆ ಶಾಲೆಯ ಮುಖ್ಯಸ್ಥೆ ಹಾಗೂ ಶಿಕ್ಷಕಿ ಹರ್ಷಿತ ಮದುಚಂದ್ರ ಮಾತನಾಡಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಇಂತಹ ಬೇಸಿಗೆ ಶಿಬಿರ ತುಂಬ ಅನುಕೂಲಕರ ಮಕ್ಕಳು ಟಿವಿ ಮೊಬೈಲ್ ವ್ಯಾಮೋಹ ದಿಂದ ಹೊರ ಬಂದು ಇಂತಹ ಸೃಜನಾತ್ಮಕ ತರಬೇತಿಯ ಶಿಬಿರದಲ್ಲಿ ಬಾಗವಹಿಸುವುದು ಉತ್ತಮ . ನಾವು ಆಯೊಜಿಸಿದ್ದ ಈ ಶಿಬಿರದಲ್ಲಿ ಪಠ್ಯೇತರ ಚಟುವಟಿಕೆಗಳಾದ ಯೋಗ, ನೃತ್ಯ, ಸಂಗೀತ ,ಚಿತ್ರ ಕಲೆ, ಬಿಡಿಸುವುದು , ದೇಸಿ ಆಟಗಳು, ಮಣ್ಣಿನಲ್ಲಿ ವಿವಿಧ ಆಕಾರದ ವಸ್ತುಗಳ ಮಾಡುವುದನ್ನು ಮಕ್ಕಳಿಗೆ ಕಲಿಸಿಕೊಡಲಾಯಿತು. ಮಹಾಭಾರತ ಹಾಗೂ ಪೌರಾಣಿಕ ಕಥೆಗಳನ್ನು ಮಕ್ಕಳಿಗೆ ಹೇಳಿಕೊಡಲಾಯಿತು,
ಶಿಬಿರದ ಕೊನೆಯ ದಿನ ಮಕ್ಕಳಿಂದಲೆ ವಿಶೇಷವಾಗಿ ಅಡುಗೆ ಮಾಡಿಸಿ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು. ಮಕ್ಕಳ ಬೆಳವಣಿಗೆಗೆ ಪೂರಕವಾದ ಎಲ್ಲಾ ತರಹದ ಆಟ ಪಾಠಗಳನ್ನು ಈ ಶಿಬಿರದಲ್ಲಿ ಆಯೊಜಿಸಲಾಗಿತ್ತು ಎಂದು ಹೇಳಿದರು.
ಅನುಭವಿ ತರಬೇತುದಾರರು ಈ ಶಿಬಿರದಲ್ಲಿ ಮಕ್ಕಳಿಗೆ ತರಬೇತಿ ನೀಡಿರುವುದು ಮಕ್ಕಳ ಮುಂದಿನ ಕಲಿಕೆಗೆ ಸಹಾಯಕವಾಗಲಿದೆ .ಈ ಶಿಬಿರದಲ್ಲಿ ಮಕ್ಕಳ ಚಟುವಟಿಕೆಗಳನ್ನು ಕಂಡು ಪೋಷಕರು ಸಹ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು. ಈ ಸಂಧರ್ಭದಲ್ಲಿ ಒಲಂಪಸ್ ಶಾಲೆಯ ಮುಖ್ಯಸ್ಥೆ ಸಮತ ಅಮೃತ್ , ಚಿತ್ರಕಲಾ ಪರಿಷತ್ತಿನ ಶಿಕ್ಷಕ ಅಲೋಕ್, ಶಿಕ್ಷಕಿ ಅಶ್ವಿನಿ, ರಶ್ಮಿ,ರೆಹಾನ ಹಾಗೂ ಶಾಲೆ ಸಿಬ್ಬಂದಿ ವರ್ಗದ ವರು ಉಪಸ್ಥಿತರಿದ್ದರು.