ಸಕಲೇಶಪುರ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇದ ಮಾಡಲು ಮುಂದಾಗಿರುವುದಕ್ಕೆ ಆಕ್ರೋಷಗೊಂಡಿರುವ ಭಜರಂಗದಳ ಕರ್ಯರ್ತರು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ವಿರುದ್ದ ಘೋಷಣೆ ಹಾಕಿ, ಹನುಮಾನ್ ಚಾಲೀಸ್ ಪಠಣ ಮಾಡಿ, ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಹಾಕುವ ಮುಖಾಂತರ ಪ್ರತಿಭಟನೆ ಮಾಡಿದರು.
ಈ ಸಂರ್ಭದಲ್ಲಿ ಭಜರಂಗದಳ ರಾಜ್ಯ ಮುಖಂಡ ರಘು ಸಕಲೇಶಪುರ ದೇಶಭಕ್ತ ಸಂಘಟನೆ ಭಜರಂಗದಳವನ್ನು ಕಾಂಗ್ರೆಸ್ ಯಾವುದೆ ಕಾರಣಕ್ಕೂ ನಿಷೇದ ಮಾಡಲು ಸಾಧ್ಯವಿಲ್ಲ. ಏಕೆಂದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ನಲ್ಲಿರುವ ರಾಷ್ಟ್ರಭಕ್ತ ಹಿಂದೂಗಳು ಕಾಂಗ್ರೆಸ್ ತೊರೆಯಿರಿ ಎಂದು ಮನವಿ ಮಾಡುತ್ತೇನೆ. ತಾಲೂಕಿನಲ್ಲಿ ಸುಮಾರು ೧೦೦೦ಕ್ಕೂ ಹೆಚ್ಚು ಮನೆಗಳ ಮುಂದೆ ಇದು ಭಜರಂಗದಳದವರ ಮನೆ, ಕಾಂಗ್ರೆಸ್ಸಿಗರಿಗೆ ಪ್ರವೇಶವಿಲ್ಲ ಎಂಬ ಭಿತ್ತಿ ಪತ್ರ ಅಂಟಿಸಿ ಕಾಂಗ್ರೆಸ್ ವಿರುದ್ದ ಅಭಿಯಾನ ಮಾಡುತ್ತೇವೆ ಎಂದರು.
ಈ ಸಂರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಬಾಳ್ಳು ಮಲ್ಲಿಕರ್ಜುನ್, ಕಬ್ಬಿನಗದ್ದೆ ಶೇಖರ್,ದುಷ್ಯಂತ್ ಗೌಡ, ರಾಮಚಂದ್ರೆಗೌಡ, ಭಜರಂಗದಳ ಮುಖಂಡರುಗಳಾದ ಆಟೋ ಲೋಕಿ, ಶ್ರೀಜಿತ್, ರ್ಮೇಶ್, ಕೌಶಿಕ್, ಶಿವು ಜಿಪ್ಪಿ ಮುಂತಾದವರು ಹಾಜರಿದ್ದರು.