ಇನ್ಮೇಲೆ ಶಿಕ್ಷಕರಿಗೆ ಮಕ್ಕಳು ‘ಸರ್’, ‘ಮೇಡಂ’ ಎಂದು ಕರೆಯುವಂತಿಲ್ಲ..!
ಶಾಲಾ ಶಿಕ್ಷಕರನ್ನು ಇನ್ಮುಂದೆ ಸರ್, ಮೇಡಂ ಎಂದು ಕರೆಯುವಂತಿಲ್ಲ. ಬದಲಾಗಿ ಅವರನ್ನು ‘ಟೀಚರ್’ ಅಂತಾ ಕರೆಯಬೇಕು ಎಂದು ಮಕ್ಕಳಿಗೆ ಸೂಚಿಸಬೇಕು ಎಂದು ರಾಜ್ಯದ ಎಲ್ಲಾ ಶಾಲೆಗಳಿಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ದೇಶಿಸಿದೆ.
ಕೇರಳ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಹೊಸ ನಿರ್ದೇಶನವೊಂದನ್ನ ನೀಡಿದೆ. ಇನ್ನೂ ಮುಂದೆ ವಿದ್ಯಾರ್ಥಿಗಳು ಶಿಕ್ಷಕರನ್ನ ‘ಸರ್’, ‘ಮೇಡಂ’ ಎಂದು ಕರೆಯಬಾರದು ಎಂದು ತಿಳಿಸಿದೆ.
ಹೌದು, ಶಾಲಾ ಶಿಕ್ಷಕರನ್ನು ಇನ್ಮುಂದೆ ಸರ್, ಮೇಡಂ ಎಂದು ಕರೆಯುವಂತಿಲ್ಲ. ಬದಲಾಗಿ ಅವರನ್ನು ‘ಟೀಚರ್’ ಅಂತಾ ಕರೆಯಬೇಕು ಎಂದು ಮಕ್ಕಳಿಗೆ ಸೂಚಿಸಬೇಕು ಎಂದು ರಾಜ್ಯದ ಎಲ್ಲಾ ಶಾಲೆಗಳಿಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ದೇಶಿಸಿದೆ.
‘ಸರ್’, ಮೇಡಂ ಅನ್ನುವುದಕ್ಕಿಂತ ‘ಟೀಚರ್’ ಎನ್ನುವ ಪದ ‘ಲಿಂಗ ತಟಸ್ಥ’ವಾಗಿರುವುದರಿಂದ ಹೀಗೆ ಕರೆಯಬೇಕು ಎಂದು ಸೂಚಿಸಿದೆ. ಅಲ್ಲದೆ ಶಿಕ್ಷಕರು ಕೂಡ ‘ಸರ್’, ಮೇಡಂ ಎನ್ನುವ ಪದಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದೆ.