Saturday, April 12, 2025
Homeಸುದ್ದಿಗಳುಸಕಲೇಶಪುರನಿರ್ಮಲನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿದ ಬಿಜೆಪಿ ಪ್ರಬಲ ಟಿಕೇಟ್ ಅಕಾಂಕ್ಷಿ ಸಿಮೆಂಟ್ ಮಂಜುನಾಥ್

ನಿರ್ಮಲನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿದ ಬಿಜೆಪಿ ಪ್ರಬಲ ಟಿಕೇಟ್ ಅಕಾಂಕ್ಷಿ ಸಿಮೆಂಟ್ ಮಂಜುನಾಥ್

ಸಕಲೇಶಪುರ: ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೇಟ್ ಅಕಾಂಕ್ಷಿ ಸಿಮೆಂಟ್ ಮಂಜುನಾಥ್ ಮಂಡ್ಯಜಿಲ್ಲೆಯಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಹೋಗಿ ನಿರ್ಮಲಾನಂದನಾಥ ಸ್ವಾಮೀಜಿರವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದುಕೊಂಡು ಕೆಲನಿಮಿಷ ಮಹತ್ವದ ಮಾತುಕತೆ ಮಾಡಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದಷ್ಟೆ ಕೆಲವರು ಸಿಮೆಂಟ್ ಮಂಜುನಾಥ್ ರವರ ಸಂಘಟನೆಯನ್ನು ಸಹಿಸದೆ ಒಕ್ಕಲಿಗ ವಿರೋಧಿ ಎಂದು ಬಿಂಬಿಸಲು ಮುಂದಾಗಿದ್ದು ಇಂದಿಗೂ ಸಹ ಕೆಲವರು ಸಿಮೆಂಟ್ ಮಂಜುನಾಥ್ ರವರ ವಿರುದ್ದ ಮಾಡುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ಭೇಟಿ ಮಹತ್ವ ಪಡೆದಿದೆ.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಹುತೇಕವಾಗಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಟಿಕೇಟ್ ಕಾರ್ಯಕರ್ತರ ಅಭಿಲಾಷೆಯಂತೆ ಸಿಮೆಂಟ್ ಮಂಜುನಾಥ್ ರವರಿಗೆ ದೊರಕಲಿದೆ ಎಂಬ ಸುದ್ದಿ ಕ್ಷೇತ್ರದ್ಯಾಂತ ಹರಡಿದೆ.

RELATED ARTICLES
- Advertisment -spot_img

Most Popular