ಸಕಲೇಶಪುರ : ಸಮಾಜದ ಹಲವಾರು ಸಾಮಾಜಿಕ ಕೆಲಸಗಳಲ್ಲಿ ನಿರಂತರ ಫೌಂಡೇಶನ್ ಸಂಸ್ಥೆಯು ತೊಡಗಿಸಿಕೊಂಡಿದೆ ಎಂದು ನಿರಂತರ ಪೌಂಡೇಶನ್ ಮುಖ್ಯಸ್ಥರಾದ ಶಿವಕುಮಾರ್ ಹೇಳಿದರು.
ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಪ್ರಾಥಮಿಕ ಶಾಲೆಗೆ ನಿರಂತರ ಪೌಂಡೇಶನ್ ಬೆಂಗಳೂರು ರವರು ಶಾಲೆಯ ವಿದ್ಯಾರ್ಥಿಗಳಿಗೆ ಸು ಮಾರು 20000 ಮೌಲ್ಯದ ಉತ್ತಮ ಗುಣಮಟ್ಟದ ಟ್ರ್ಯಾಕ್ ಸೂಟ್ ಹಾಗೂ ಲೇಖನ ಸಾಮಗ್ರಿ ಉಪಕರಣಗಳನ್ನು ಕೊಡುಗೆಯಾಗಿ ಮಾತನಾಡಿ, ನಮ್ಮ ಸಂಸ್ಥೆಯು ಹಲವಾರು ಯೋಜನೆಗಳ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆಯನ್ನು ಕೊಡುತ್ತಾ ಬಂದಿದೆ. ಎಂದರು. ನಮ್ಮ ಸಂಸ್ಥೆಯನ್ನು 2009 ರಲ್ಲಿ ನೋಂದಣಿ ಮಾಡಿಸಿ ಸುಮಾರು 15 ವರ್ಷಗಳಿಂದ ನಿರಂತರವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆಯನ್ನು ನೀಡುತ್ತಾ ಬಂದಿದ್ದೇವೆ ಇದುವರೆಗೆ 173 ಸರ್ಕಾರಿ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸಿದ್ದೇವೆ ಎಂದು ಹೇಳಿದರು. ನಮ್ಮ ಪೌಂಡೇಶನ್ ವತಿಯಿಂದ ಕಂಪ್ಯೂಟರ್, ಕುರ್ಚಿ,ಟೇಬಲ್ಗಳು, ಪ್ರಿಂಟಿಂಗ್ ಮಿಷನ್, ಟ್ರ್ಯಾಕ್ ಸೂಟ್ ಹೀಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದೇವೆ ನಮ್ಮ ಪೌಂಡೇಶನ್ ನಲ್ಲಿ 10 ಜನ ಟ್ರಸ್ಟಿಗಳು ಸೇರಿ ಸ್ವಯಂಪ್ರೇರಿತರಾಗಿ ಸಮಾಜ ಸೇವೆ ಮಾಡುತ್ತಾ ಬಂದಿದ್ದೇವೆ ಮುಂದೆಯೂ ಇದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು. ಜೊತೆಗೆ ನಮ್ಮ ಪೌಂಡೇಶನ್ ವತಿಯಿಂದ ಅನಾಥಾಶ್ರಮ, ವೃದ್ಧಾಶ್ರಮ ಗಳಿಗೆ ದಿನಸಿ ಪದಾರ್ಥಗಳು,ಬಟ್ಟೆ,ಹಣ್ಣು ವಿತರಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಹೇಳಿದರು.
ಮುಖ್ಯ ಶಿಕ್ಷಕರಾದ ದೊರೇಶ ಎಂ ಎಸ್ ಮಾತನಾಡಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ತಮ್ಮ ದುಡಿಮೆಯ ಹಣದಲ್ಲಿ ಯಾವುದೇ ಪ್ರಚಾರ ಬಯಸದೇ ನೀವು ಮಾಡುತ್ತಿರುವ ಸಮಾಜ ಮುಖಿ ಕಾರ್ಯ ಶ್ಲಾಘನೀಯ ಎಂದರು. ನಿರಂತರ ಸಂಸ್ಥೆಯ ಈ ಯೋಜನೆಯಿಂದ ಸಾವಿರಾರು ಮಕ್ಕಳಿಗೆ ಸಹಾಯವಾಗಿದೆ, ಈ ಯೋಜನೆಗೆ ತಮ್ಮ ಸಮಯ, ಹಣದ ಸಹಾಯ ಮಾಡಿದ ಎಲ್ಲಾ ಸ್ವಯಂಸೇವಕರಿಗೆ ಮತ್ತು ದಾನಿಗಳಿಗೆ, ಸಂಸ್ಥೆಯು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ನಿರಂತರ ಸಂಸ್ಥೆಯ ನವೀನ್ ಕುಮಾರ್, ಪುನೀತ್, ವಿನಯ್ ಶಾಲೆಯ SDMC ಅಧ್ಯಕ್ಷ ಧರ್ಮ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸೋಮಶೇಖರ್, ಮಾಜಿ ಅಧ್ಯಕ್ಷ ರವಿಕುಮಾರ್,ಸದಸ್ಯರಾದ ಕಾವ್ಯ ರವಿಕುಮಾರ್,ಆಶಾ ಕಾರ್ಯಕರ್ತೆ ವಿಮಲಾ, ಶಾಲೆಯ ಸಹಶಿಕ್ಷಕಿ ಸಂಧ್ಯಾ ಹಾಗೂ ಪೋಷಕರು ,SDMC ಸದಸ್ಯರು ಹಾಜರಿದ್ದರು