Saturday, April 12, 2025
Homeಸುದ್ದಿಗಳುಸಕಲೇಶಪುರದಲ್ಲಾಳಿ ಮುಕ್ತ ಎ.ಆರ್.ಟಿ.ಓ ಕಚೇರಿ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲ: ಶಾಸಕ ಸಿಮೆಂಟ್ ಮಂಜು

ದಲ್ಲಾಳಿ ಮುಕ್ತ ಎ.ಆರ್.ಟಿ.ಓ ಕಚೇರಿ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲ: ಶಾಸಕ ಸಿಮೆಂಟ್ ಮಂಜು

ದಲ್ಲಾಳಿ ಮುಕ್ತ ಎ.ಆರ್.ಟಿ.ಓ ಕಚೇರಿ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲ: ಶಾಸಕ ಸಿಮೆಂಟ್ ಮಂಜು

ಸಕಲೇಶಪುರ: ಎಆರ್‌ಟಿಓ ಕಚೇರಿ ದಲ್ಲಾಳಿಗಳಿಂದ ಮುಕ್ತವಾಗಿ ಸಾರ್ವಜನಿಕರಿಗೆ ನೇರ ಪ್ರವೇಶವಿರಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

    ತಾಲೂಕಿನ ಬಾಗೆ ಗ್ರಾಮದಲ್ಲಿ ನೂತನ ಎಆರ್‌ಟಿಓ ಕಚೇರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಸುಮಾರು 20 ವರ್ಷಗಳಿಂದ ಎಆರ್‌ಟಿಓ ಕಚೇರಿ ಬಾಳೆಗದ್ದೆಯಲ್ಲಿರುವ ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆದರೆ ಸದರಿ ಜಾಗವು ಕಿರಿದಾಗಿದ್ದರಿಂದ ಸಾರ್ವಜನಿಕರಿಗೆ ಕೆಲವೊಂದು ಸೇವೆಗಳನ್ನು ತ್ವರಿತ್ವವಾಗಿ ನೀಡಲು ಅನಾನುಕೂಲವಾಗಿತ್ತು. ಈ ನಿಟ್ಟಿನಲ್ಲಿ ಉತ್ತಮ ಎ.ಆರ್.ಟಿ.ಓ ಕಚೇರಿ ಆಗಬೇಕೆಂಬ ದೃಷ್ಟಿಯಿಂದ ಬಾಗೆ ಗ್ರಾಮದಲ್ಲಿ ಹೊಸ ಕಚೇರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇಲ್ಲಿ ಎರಡು ಕಾಮಗಾರಿಗಳನ್ನು ಮಾಡಲಾಗುತ್ತಿದ್ದು ಎ.ಆರ್.ಟಿ.ಓ ಕಚೇರಿ ನಿರ್ಮಾಣಕ್ಕೆ 4 ಕೋಟಿ ಅನುದಾನ ಮೀಸಲಿಡಲಾಗಿದ್ದು, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಟ್ರ್ಯಾಕ್‌ಗೆ 5 ಕೋಟಿರೂ ಮಂಜೂರಾಗಿದ್ದು ಒಟ್ಟು 9ಕೋಟಿ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇಲ್ಲಿ ಸುಮಾರು 4.5 ಎಕರೆ ಜಾಗ ಇದ್ದು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ ಆದರೆ ಸಮಸ್ಯೆ ಏನು ಅಂದರೆ ಮುಖ್ಯ ರಸ್ತೆಯಿಂದ ಇಲ್ಲಿಗೆ ಬರಲು ಜಾಗ ಅತ್ಯಂತ ಕಿರಿದಾಗಿದೆ. ಒಂದು ವಾಹನ ಬಂದರೆ ಮತ್ತೊಂದು ವಾಹನ ಹೋಗಲು ಅವಕಾಶವಿರುವುದಿಲ್ಲ. ಇಷ್ಟೆಲ್ಲಾ ಹಣ ಖರ್ಚು ಮಾಡಿ ವಾಹನಗಳು ಸರಾಗವಾಗಿ ತಿರುಗಾಡದಿದ್ದಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಎ.ಆರ್.ಟಿ.ಓ ಕಚೇರಿಗೆ ಹೋಗುವ ರಸ್ತೆಯು ಸಾರ್ವಜನಿಕರು ನೆಮ್ಮದಿಯಾಗಿ ತಿರುಗಾಡುವಂತಿರಬೇಕು ಕನಿಷ್ಠ 15ರಿಂದ 20 ಅಡಿ ರಸ್ತೆಯನ್ನು ಇಲ್ಲಿ ಅಗಲಿಕರಣ ಮಾಡಲು ನಾನು ತಹಶೀಲ್ದಾರ್ ಜೊತೆ ಚರ್ಚೆ ಮಾಡುತ್ತೇನೆ ಎಂದರು.

    ಎ.ಆರ್.ಟಿ.ಓ ಮಧುರಾ ಮಾತನಾಡಿ 2018,19ರಲ್ಲಿ ಎಆರ್‌ಟಿಓ ಕಚೇರಿ ಮಾಡಲು ಜಾಗ ಮಂಜೂರಾಯಿತು. ಆದರೆ ಬಹಳ ನಿಧಾನಗತಿಯಲ್ಲಿ ಯೋಜನೆಗೆ ಚಾಲನೆ ದೊರಕಿದೆ. ಇಲ್ಲಿ ದ್ವಿಚಕ್ರವಾಹನ ,ನಾಲ್ಕು ಚಕ್ರ ವಾಹನಗಳ ಟೆಸ್ಟಿಂಗ್ ಟ್ರ್ಯಾಕ್ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ನಿರ್ಮಾಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಪ್ರಾದೇಶಿಕ ಸಾರಿಗೆ ಕಚೇರಿಯಾಗಿ ಉನ್ನತಿಕರಣವಾಗುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ ಇದ್ದ ಕಟ್ಟಡ ಕಿರಿದಾಗಿದ್ದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿತ್ತು ಅಲ್ಲದೆ ವಾಹನಗಳ ಸಂಖ್ಯೆ ಸಹ ಹೆಚ್ಚಾಗಿ ಕಡತಗಳನ್ನು ಇಡಲು ಮತ್ತಿತರ ಸೇವೆಗಳನ್ನು ಸಾರ್ವಜನಿಕರಿಗೆ ತ್ವರಿತ್ವವಾಗಿ ನೀಡಲು ಕಷ್ಟಕರವಾಗುತ್ತಿತ್ತು. ಹೊಸ ಕಟ್ಟಡ ನಿರ್ಮಾಣದಿಂದ ಸಾರ್ವಜನಿಕರಿಗೆ ವೇಗವಾಗಿ ಸೇವೆ ನೀಡಲು ಸಾಧ್ಯವಾಗುತ್ತದೆ. ಈಗಾಗಲೆ ನಮ್ಮ ಇಲಾಖೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸೇವೆ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿ ಸಂಪೂರ್ಣವಾಗಿ ತಂತ್ರಜ್ಞಾನ ಬಳಕೆ ಮಾಡಿ ಉತ್ತಮವಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲಾಗುತ್ತದೆ. ಇಲ್ಲಿ ನಿರ್ಮಾಣವಾಗುತ್ತಿರುವ ಟ್ರ್ಯಾಕ್ ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ ಎಂದರು.

   ಈ ಸಂಧರ್ಭದಲ್ಲಿ ಬಾಗೆ ಗ್ರಾ.ಪಂ ಅಧ್ಯಕ್ಷೆ ರೇಖಾ ಗೋಪಿನಾಥ್, ಉಪಾಧ್ಯಕ್ಷೆ ವನಜಾಕ್ಷಿ ಗ್ರಾ.ಪಂ ಸದಸ್ಯರಾದ ಪುಷ್ಪ, ಕವಿತಾ, ಕೆ.ಎಸ್.ಆರ್.ಸಿ ಅಧಿಕಾರಿಗಳಾದ ರಂಗರಾಜ್, ಶ್ರೀ‘ರ್, ಎ.ಆರ್.ಟಿ.ಓ ಅಧಿಕಾರಿಗಳಾದ ಆಶಾ, ಮೋಹನ್ ಕುಮಾರ್, ಬಿಜೆಪಿ ಮುಖಂಡರುಗಳಾದ ಜೈಪ್ರಕಾಶ್ ದೊಡ್ಡದೀಣೆ, ಅಶ್ವಥ್,ಗೋಪಿನಾಥ್, ಅಗ್ನಿ ಸೋಮು, ನೇತ್ರಾವತಿ ಮಂಜುನಾಥ್, ಬಬೀತಾ ವಿಶ್ವನಾಥ್, ಲೋಕೇಶ್, ವೈ.ಡಿ ಬಸವಣ್ಣ , ಶಿವಕುಮಾರ್, ಪ್ರದೀಪ್, ರಾಕೇಶ್ ಮುಂತಾದವರು ಹಾಜರಿದ್ದರು. 

RELATED ARTICLES
- Advertisment -spot_img

Most Popular