Wednesday, January 28, 2026
Homeಸುದ್ದಿಗಳುಸಕಲೇಶಪುರಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ನೀರುಪಾಲು

ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ನೀರುಪಾಲು

ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ನೀರುಪಾಲು
ಚನ್ನರಾಯಪಟ್ಡಣ,; ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊರ್ವಳು ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಇಂದು  ನಡೆದಿದೆ.ರಂಜಿತಾ (11) ಮೃತ ವಿದ್ಯಾರ್ಥಿನಿ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ದಡ್ಡಿಹಳ್ಳಿ ಕೆರೆ ಕೋಡಿ ಬಳಿ ಘಟನೆ ನಡೆದಿದೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕೆರೆ ಕೋಡಿಯಲ್ಲಿ ರಭಸವಾಗಿ ಹರಿಯುತಿದ್ದ ನೀರು ಹರಿಯುತ್ತಿತ್ತು.
ತನ್ನ ದೊಡ್ಡಪ್ಪನ ಮಗನ ಜೊತೆ ರಂಜಿತಾ ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ  ಬೈಕ್ ನಿಂದ ಜಾರಿಬಿದ್ದ ಹಿನ್ನೆಲೆಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ
ಹೆಗ್ಗಡಗೆರೆ ಗ್ರಾಮದ ರಾಜಾಭೋವಿ ಎಂಬುವರ  ಪುತ್ರಿ ರಂಜಿತಾ ಐದನೇ ತರಗತಿ ಓದುತ್ತಿದ್ದಳು. ಬಾಲಕಿಯ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟತ್ತು. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲಿಸಿದ್ದುಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
RELATED ARTICLES
- Advertisment -spot_img

Most Popular