ಸಕಲೇಶಪುರ:- ಯಶಸ್ವಿಯಾಗಿ ಕೊನೆಗೊಂಡ ಆರ್.ಎಸ್.ಎಸ್ ಪಥಸಂಚಲನ.ಗಣವೇಷಧಾರಿ ಸ್ವಯಂ ಸೇವಕರು ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ
ಪ್ರಾಥಮಿಕ ಶಿಕ್ಷಾವರ್ಗ-2022 ರ ಸಮಾರೋಪ ಸಮಾರಂಭ ನಡೆಯುವ ವೇದಿಕೆಯವರೆಗೂ ಆಕರ್ಷಕ ಪಥಸಂಚಲನ ನಡೆಸಿದರು.
ಭಾರತಾಂಬೆಯ ಭಾವಚಿತ್ರದ ಜೊತೆಗೆ ತೆರೆದ ವಾಹನದಲ್ಲಿ ಕೇಶವ ಬಲಿರಾಮ ಹೆಡಗೇವಾರ್, ಮಾದವ ಸದಾಶಿವ ಗೋಳ್ವಾಲ್ಕರ್
ಅವರ ಭಾವಚಿತ್ರಗಳ ಮೆರವಣಿಗೆ ಗಮನ ಸೆಳೆದವು. ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸ್ವಯಂ ಸೇವಕರು ಮಾಡಿದರು.
ಡಿವೈಎಸ್ಪಿ ಮಿಥುನ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಕ್ರಮ ಕೈಗೊಳ್ಳಲಾಗಿಯ್ತು.