ಕಲೇಶಪುರ ಪಟ್ಟಣದಲ್ಲಿ ಹಾದು ಹೊರಗಿರುವ ರಾಷ್ಟ್ರೀಯ ಹೆದ್ದಾರಿ 75 ರ ದುರಸ್ತಿ ಕಾರ್ಯವನ್ನು ಹೆದ್ದಾರಿ ಪ್ರಾಧಿಕಾರದವರು ನಡೆಸದೆ ಪಟ್ಟಣದ ಒಳಭಾಗದಲ್ಲಿ ಹೋಗಿರುವ ರಸ್ತೆ ಸಂಪೂರ್ಣ ಗುಂಡಿಯಾಗಿದೆ ಹಾಗೂ ಹೇಮಾವತಿ ನದಿ ಸೇತುವೆಯ ಮೇಲ್ಭಾಗದಲ್ಲಿ ಡಾಂಬರ್ ಮಳೆಯಿಂದಾಗಿ ಕಿತ್ತು ಹೋಗಿದ್ದು ಅದನ್ನು ಕೂಡಲೆ ದುರಸ್ತಿ ಮಾಡಿಸಬೇಕು ಹಳೆ ಸೇತುವೆಗೆ ವಿದ್ಯುತ್ ದೀಪಗಳು ಇಲ್ಲದೆ ಜನರು ಸಂಚರಿಸಲು ತೊಂದರೆ ಯಾಗುತಿದೆ.
ಆದುದರಿಂದ, ಈ ಅವ್ಯವಸ್ಥೆಯನ್ನು ತಕ್ಷಣ ಸರಿಪಡುವಂತೆ ಒತ್ತಾಯಿಸಿ, ದಿನಾಂಕ 21.10.2022ರಂದು ಬೆಳಗ್ಗೆ 11 ಗಂಟೆಗೆ ಸಕಲೇಶಮರ ಪಟ್ಟಣದ ಸೇತುವೆಯ ಮೇಲ್ಬಾಗದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಎಂದು ಉಪವಿಭಾಗದ ದಿಕಾರಿಗಳ ಕಛೆರಿಗೆ ಮನವಿ ಸಲ್ಲಿಸಲಾಯಿತು . ಈ ಸಂಧರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ, ಸಂಘಟನೆಯ ಮುಖಂಡರುಗಳಾದ ರವಿನಾರಾಯಣ್, ಉಮೇಶ್, ಗಿರೀಶ್ ಮುಂತಾದವರು ಹಾಜರಿದ್ದರು