Sunday, November 24, 2024
Homeಸುದ್ದಿಗಳುನಡಹಳ್ಳಿ ಗ್ರಾಮಸ್ಥರಿಗೆ ಖಾಯಂ ಹಕ್ಕುಪತ್ರ ನೀಡುವಂತೆ ಎಸಿಗೆ ಮನವಿ. ಗ್ರಾಮದ ಸ,ನಂ 197 ರ...

ನಡಹಳ್ಳಿ ಗ್ರಾಮಸ್ಥರಿಗೆ ಖಾಯಂ ಹಕ್ಕುಪತ್ರ ನೀಡುವಂತೆ ಎಸಿಗೆ ಮನವಿ. ಗ್ರಾಮದ ಸ,ನಂ 197 ರ ಜಮೀನಿನಲ್ಲಿ ಅನುಭವದಲ್ಲಿರುವ ಹಲವಾರು ಕುಟುಂಬಗಳು

 

ಸಕಲೇಶಪುರ : ತಾಲೂಕಿನ ಕಸಬಾ ಹೋಬಳಿ ಹೆಬ್ಬಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಡಹಳ್ಳಿ ಗ್ರಾಮದ ಸ,ನಂ 197 ರ ಜಮೀನಿನಲ್ಲಿ ಅನುಭವದಲ್ಲಿರುವ ನಮ್ಮಗಳಿಗೆ ಹಕ್ಕುಪತ್ರ ನೀಡಿ’ ಖಾಯಂ ಮಾಡಿಕೊಡುವಂತೆ ಉಪವಿಭಾಗಾಧಿರಿ ಅನ್ಮೋಲ್ ಜೈನ್ ಗೆ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು.

ನಡಹಳ್ಳಿ ಗ್ರಾಮದ ಸರ್ವೆ ನಂ 197ರಲ್ಲಿ ಸುಮಾರು 80 ವರ್ಷಗಳಿಗೂ ಹಿಂದಿನಿಂದಲೂ ನಮ್ಮ ಪೂರ್ವಜರ ಕಾಲದಿಂದಲೂ ಇದೆ ಸರ್ವೆ ನಂಬರ್ ಈ ಜಾಗದಲ್ಲಿ ಸುಮಾರು ಹದಿನೈದು ಕುಟುಂಬಗಳು ಮನೆ ಗದ್ದೆ ತೋಟ ಮಾಡಿಕೊಂಡು ವಾಸವಾಗಿರುತ್ತೇವೆ. ಆದಾಗ್ಯೂ ಈ ನಡುವೆ 2010-2011 ರಲ್ಲಿ ಯಾವುದೇ ಕಾರಣವಿಲ್ಲದೆ ಯಾವುದೇ ಮುನ್ನೆಚ್ಚರಿಕೆ ನೀಡದೆ ನಮ್ಮಗಳ ಗಮನಕ್ಕೆ ಬಾರದೆ ಆಕ್ರಮವಾಗಿ ಅರಣ್ಯ ಇಲಾಖೆಯವರು ನಮ್ಮಗಳ ಮನೆ ಸಾಗುವಳಿ ಮಾಡಿರುವ ಜಮೀನು ಎಲ್ಲವನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸಿಕೊಂಡಿರುತ್ತಾರೆ. ಇದರಿಂದಾಗಿ ನಮ್ಮಗಳ ಬದುಕುವ ಹಕ್ಕನ್ನು ಕಿತ್ತುಕೊಂಡಿರುತ್ತಾರೆ ಆದ್ದರಿಂದ ಕೂಡಲೆ ತಾವುಗಳು ನಡಹಳ್ಳಿ ಗ್ರಾಮದ ಸರ್ವೆ ನಂಬರ್ 197 ಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ನಾವುಗಳು ಈಗಾಗಲೆ 53, 57, 94ಸಿ ಅರ್ಜಿ ಫಾರಂಗಳಲ್ಲಿ ಸಾಗುವಳಿ ಭೂಮಿ ಮತ್ತು ಮನೆಗೆ ಅರ್ಜಿಸಲ್ಲಿಸಿರುತ್ತೇವೆ ಅದನ್ನು ಪರಿಗಣಿಸಿ ಅರಣ್ಯ ಇಲಾಖೆಗೆ ವರ್ಗಾವಣೆಯಾಗಿರುವುದನ್ನು ರದ್ದುಪಡಿಸಿ ನಮ್ಮಗಳಿಗೆ ಹಕ್ಕುಪತ್ರ ಕೊಡಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಪಂಚಾಯತಿ ಸದಸ್ಯ, ನಾಗೇಶ್,ಜಗದೀಶ್, ಧರ್ಮರಾಜ್, ಯುನಸ್, ನದಿಮ್,ಕುಮಾರಯ್ಯ ಪರಮೇಶ್, ಶೀಲಾ, ಮಂಜುಳಾ, ಮೀನಾಕ್ಷಿ, ಪಾರ್ವತಿ ಮಂಜಮ್ಮ, ಪುಟ್ಟಮ್ಮ, ಶೋಭಾ ಜಯಂತಿ ಸೇರಿ ಮುಂತಾದವರು ಇದ್ದರು

RELATED ARTICLES
- Advertisment -spot_img

Most Popular