ಸಕಲೇಶಪುರ : ಧರ್ಮಸ್ಥಳದಲ್ಲಿ ನಡೆಯುವ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಪಾಲ್ಗೊಳ್ಳಲು ಸಾವಿರಾರು ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ಧರ್ಮಸ್ಥಳಕ್ಕೆ ದೂರದೂರುಗಳಿಂದ ಪಾದಯಾತ್ರೆಯಲ್ಲಿ ತೆರಳುತ್ತಿರುವ ಸಾವಿರಾರು ಭಕ್ತರಿಗೆ ಆಲೂರು ತಾಲ್ಲೂಕಿನ ಈಶ್ವರ ಹಳ್ಳಿ ಕೂಡಿಗೆ ಅಬೂಬಕ್ಕರ್ ಸಿದ್ದೀಕ್ ಮಸೀದಿ ಆಡಳಿತ ಸಮಿತಿ ಮತ್ತು ಇತರೆ ಮುಸ್ಲಿಂ ಯುವಕರು ತಂಪು ಪಾನಿಯ ಜೊತೆಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡುವ ಮೂಲಕ ಸಾರ್ಥಕ ಸೇವೆ ಸಲ್ಲಿಸುವ ಮೂಲಕ ಸೌಹಾರ್ದತೆ ಎತ್ತಿ ಹಿಡಿದರು.
ಆಲೂರು : ಪಾದಯಾತ್ರಿಗಳಿಗೆ ತಂಪು ಪಾನಿಯ ವಿತರಿಸುವ ಮೂಲಕ ಸೌಹಾರ್ದತೆಯನ್ನು ಗಟ್ಟಿಗೊಳಿಸಿದ ಈಶ್ವರಹಳ್ಳಿಯ ಮುಸ್ಲಿಮ್ ಯುವಕರು
ಪ್ರತಿ ವರ್ಷ ಶಿವರಾತ್ರಿ ಸಂಧರ್ಭದಲ್ಲಿ ಕರ್ನಾಟಕದ ನಾನಾ ಭಾಗದ ವಿವಿಧ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯ ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳುವುದು ಸಂಪ್ರದಾಯ. ಯಥಾ ಪ್ರಕಾರ ಈ ವರ್ಷವೂ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ನೂರಾರು ಕಿ.ಮೀ. ದೂರ ನಡೆದೇ ತೆರಳುತ್ತಾರೆ. ಭಕ್ತರಿಗಾಗಿ ಹಾಸನ ಜಿಲ್ಲೆಯ ವಿವಿದ ಸ್ಥಳಗಳಲ್ಲಿ ಸಂಘ ಸಂಸ್ಥೆಗಳು, ಗ್ರಾಮಸ್ಥರು, ಸಾರ್ವಜನಿಕರು ಉಚಿತ ಊಟ, ಉಪಹಾರದ ವ್ಯವಸ್ಥೆಯನ್ನು ಮಾಡುತ್ಯಿದೆ.
ಈ ಸಂದರ್ಭದಲ್ಲಿ ಮೊಹಮ್ಮದ್, ಸಿರಾಜ್,ತೌಸೀಫ್, ಸಿದ್ದೀಕ್, ಸಲೀಂ ಮತ್ತು ಸುಹೀಲ್ ಇನ್ನಿತರರು ಇದ್ದರು