ಬಸವೇಶ್ವರ ಹಾಗೂ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡುವಂತೆ ಕಾಂಗ್ರೆಸ್ ಮುಖಂಡ ಮುರಳಿಮೋಹನ್ ಮನವಿ
ಸಕಲೇಶಪುರ: *ಮಲೆನಾಡು ವೀರಶೈವ ಲಿಂಗಾಯಿತ ಸಮಾಜ* ದಿಂದ ಸಕಲೇಶಪುರ ತಾಲೂಕಿನಲ್ಲಿ ನಿರ್ಮಾಣ ಮಾಡುತ್ತಿರುವ *ಜಗಜ್ಯೋತಿ ಶ್ರೀ ಬಸವೇಶ್ವರರ ಪುತ್ಥಳಿ* ನಿರ್ಮಾಣ ಕಾರ್ಯದ ಕೆಲಸವನ್ನು ತಾಲ್ಲೂಕು ಆಡಳಿತ ಅಧಿಕಾರಿಗಳು ನಿಲ್ಲಿಸಲು ನೋಟಿಸ್ ಜಾರಿ ಮಾಡಿರುತ್ತಾರೆ ಅದಕ್ಕಾಗಿ ಮಲೆನಾಡು ವೀರಶೈವ ಸಮಾಜದಿಂದ ಪ್ರತಿಭಟನೆಯನ್ನು ಮಾಡಿರುತ್ತಾರೆ ಹಾಗೇ ಸಕಲೇಶಪುರ ತಾಲ್ಲೂಕಿನ *ಒಕ್ಕಲಿಗ ಸಮುದಾಯದವರಿಂದ ನಾಡಪ್ರಭು ಕೆಂಪೇಗೌಡ* ರವರ ಪುತ್ಥಳಿ ಭೂಮಿ ಪೂಜೆಯನ್ನು ನಡೆಸಿರುತ್ತಾರೆ ಇದಕ್ಕೂ ಕೂಡ ತಾಲೂಕಿನ ಆಡಳಿತ ಅಧಿಕಾರಿಗಳು ಅಡ್ಡಿಯನ್ನು ಮಾಡಿ ನೋಟಿಸ್ ಜಾರಿ ಮಾಡಿರುತ್ತಾರೆ ಈ ವಿಷಯವಾಗಿ ಸಕಲೇಶಪುರ ತಾಲೂಕಿನ ವೀರಶೈವ ಸಮುದಾಯದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ತಾಲ್ಲೂಕಿನ ಒಕ್ಕಲಿಗ ಸಮುದಾಯದ ಅಧ್ಯಕ್ಷರು ಪದಾಧಿಕಾರಿಗಳೊಂದಿಗೆ *ಮುರಳಿ ಮೋಹನ್* ರವರು *ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಕೆ.ಎನ್ ರಾಜಣ್ಣ ಹಾಗೂ ಸಂಸದ ಡಿ.ಕೆ ಸುರೇಶ್ ರವರನ್ನು ಭೇಟಿ ಮಾಡಿ ತಾಲ್ಲೂಕಿನ ಸಮಸ್ಯೆ ಬಗ್ಗೆ ಪತ್ರವನ್ನು ಬರೆದು ಸಮಸ್ಯೆ ನಿವಾರಣೆಗೆ ಬಗ್ಗೆ ಚರ್ಚಿಸಿ ಅಲ್ಲಿಯೇ ಸಮಸ್ಯೆ ಬಗ್ಗೆ ಹಾಸನ ಜಿಲ್ಲಾಧಿಕಾರಿಗಳಿಗೆ ಫೋನ್ ಕರೆಯನ್ನು ಮಾಡಿಸಿ ಯಾವುದೇ ಸಮಸ್ಯೆ ಆಗದಂತೆ ಪುತ್ತಳಿ ನಿರ್ಮಾಣ ಕಾರ್ಯವನ್ನ ಮುನ್ನಡೆಸಬೇಕೆಂದು ಮನವಿ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ಎಚ್.ಎಂ ವಿಶ್ವನಾಥ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು ಮುಂತಾದವರು ಹಾಜರಿದ್ದರು.