ಪೌರಾಡಳಿತ ಸಚಿವ ರಹೀಮ್ ಖಾನ್ ಭೇಟಿ ಮಾಡಿದ ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ : ಮಳಲಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕಸ ವಿಲೇವಾರಿ ಘಟಕದ ಉದ್ಘಾಟನೆಗೆ ದಿನಾಂಕ ಕೊಡುವಂತೆ ಶಾಸಕ ಸಿಮೆಂಟ್ ಮಂಜು ಪೌರಾಡಳಿತ ಸಚಿವ ರಹೀಮ್ ಖಾನ್ ರವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್ ರವರಿಗೆ ಮನವಿ ಸಲ್ಲಿಸಿ ಪಟ್ಟಣದಲ್ಲಿ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆ ಮಿತಿ ಮೀರಿದ್ದು ಕಸ ಹಾಕಲು ಜಾಗ ಇಲ್ಲದಂತಾಗಿದೆ. ಇದರಿಂದ ಪಟ್ಟಣದಲ್ಲಿ ಎಲ್ಲೆಲ್ಲೂ ತ್ಯಾಜ್ಯ ಬೀಳುವಂತಾಗಿದೆ.ಪಟ್ಟಣಕ್ಕೆ ಸಮೀಪದಲ್ಲಿರುವ ಮಳಲಿ ಗ್ರಾಮದಲ್ಲಿ ಪುರಸಭೆಯ ಘನ ತಾಜ್ಯ ವಿಲೇವಾರಿ ಘಟಕದ ಕಾಮಗಾರಿ ಬಹುತೇಕ ಮುಗಿದಿದ್ದು ತಾವು ಉದ್ಘಾಟನೆಗೆ ಸಮಯ ನೀಡಿದರೆ ಶೀಘ್ರದಲ್ಲಿ ಇದರ ಉದ್ಘಾಟನೆ ಮಾಡಬಹುದಾಗಿದೆ ಮತ್ತು ಪಟ್ಟಣದ ಜಾತ್ರ ಮೈದಾನದಲ್ಲಿ ಸಾವಿರಾರು ಟನ್ ಗಳಷ್ಟ್ಟು ಪುರಸಭೆಯ ತ್ಯಾಜ್ಯವಿದ್ದು ಇದನ್ನು ಸಹ ಪುರಸಭೆ ವತಿಯಿಂದ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.