ಸಾವಿನಲ್ಲಿ ಸಾರ್ಥಕತೆ ಮೆರೆದ ವಿದ್ಯಾರ್ಥಿನಿ.
ಮೂಡಿಗೆರೆ: ಮೂಡಿಗೆರೆ ಬೆಥನಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಹೆಸರಿನ ಬಾಲಕಿ 7.30ಗಂಟೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾಳೆ.ಮೂಡಿಗೆರೆ ಎಂ.ಜಿ ರಸ್ತೆಯ ರಾಮೇಶ್ವರ ಮೆಡಿಕಲ್ ಪಕ್ಕದ ಚಿನ್ನದ ರಿಪೇರಿ ಅಂಗಡಿ ಮಾಲೀಕರ ಪುತ್ರಿಯಾಗಿದ್ದು ಆಕೆಯ ಎರಡೂ ಕಣ್ಣುಗಳನ್ನು ದಾನ ಮಾಡಲು ಆಕೆಯ ತಂದೆತಾಯಿ ನಿರ್ಧರಿಸಿದ್ದು ಹಾಸನದ ಮೆಡಿಕಲ್ ಕಾಲೇಜಿನ eye bank ವೈದ್ಯರ ತಂಡ ಈಗ ಮೂಡಿಗೆರೆಗೆ ಭೇಟಿನೀಡಿ ಕಣ್ಣುಗಳನ್ನು ತೆಗೆದು ಕೊಂಡೊಯ್ಯಲಿದ್ದಾರೆ ನಂತರ ಮೃತದೇಹವನ್ನು ಅವರ ಊರು ಮಹಾರಾಷ್ಟ್ರಕ್ಕೆ ಕೊಂಡೊಯ್ಯಲಿದ್ದಾರೆ.