ಸಕಲೇಶಪುರದಲ್ಲಿ : ಪಟ್ಟಣದಲ್ಲಿ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ರವರಿಗೆ ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಿ ದಿನಾಂಕ : 20.11.2022 ರಂದು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ರೈತ ಮಹಿಳೆಯೊಬ್ಬರನ್ನು ಕಾಡಾನೆ ದಾಳಿ ಮಾಡಿ, ಸಾಯಿಸಿರುವ ಮಹಿಳೆಯ ಸಾವನ್ನು ನೋಡಲು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಪರಿಹಾರ ಕೊಡಿಸಲು, ಹಾಗೂ ಆ ಕುಟುಂಬದವರ ನೋವಿನ ಬಗ್ಗೆ ಮತ್ತು ಗ್ರಾಮದ ಗ್ರಾಮಸ್ಥರೊಟ್ಟಿಗೆ ಮಾತನಾಡಲು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿರವರು ಆ ಗ್ರಾಮಕ್ಕೆ ಹೋದಾಗ ಅಲ್ಲಿ ಸೇರಿದ್ದ ಜನರು ಪೋಲಿಸರ ಎದುರಲ್ಲೇ ದೊಣ್ಣೆಗಳಿಂದ ಎಂ.ಎಲ್.ಎ.ಗೆ ಹೊಡೆಯಲು ಓಡಾಡಿಸಿಕೊಂಡು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೈಮೇಲಿನ ಬಟ್ಟೆಗಳನ್ನು ಹರಿದು ಹಾಕಿದ್ದಾರೆ. ಅವ್ಯಾಚ್ಯ ಶಬ್ದಗಳಿಂದ ಹೀನಾಯವಾಗಿ ಬೈದಿರುತ್ತಾರೆ, ಅಮಾನುಷವಾಗಿ ದೌರ್ಜನ್ಯ ಮಾಡಲಾಗಿದ್ದು ಇದೊಂದು ರೀತಿಯಲ್ಲಿ ಕೊಲೆ ಪ್ರಯತ್ನವಾಗಿದೆ,
ಈ ದೌರ್ಜನ್ಯವನ್ನು ಸಕಲೇಶಪುರ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟಗಳು ತೀವ್ರವಾಗಿ ಖಂಡಿಸುತ್ತದೆ ಮತ್ತು ಸಕಲೇಶಪುರ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಕೆಳಕಂಡಂತೆ ಒತ್ತಾಯಿಸುತ್ತಿದ್ದೇವೆ.
1. ಹಾಲಿ ಶಾಸಕರು ಮತ್ತು ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷರು ಆದ ಎಂ.ಪಿ.ಕುಮಾರಸ್ವಾಮಿರವರ ಮೇಲೆ ದೌರ್ಜನ್ಯ ನಡೆಸಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ, ಕಾನೂನು ರೀತ್ಯಾ ಕ್ರಮಕೈಗೊಂಡು ಶಾಸಕ ಎಂ.ಪಿ ಕುಮಾರಸ್ವಾಮಿರವರಿಗೆ ನ್ಯಾಯ ಮತ್ತು ಭದ್ರತೆಯನ್ನು ಒದಗಿಸಿಕೊಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.
2. ಆನೆ ದಾಳಿಯಿಂದ ಮರಣ ಹೊಂದಿರುವ ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವನ್ನು ಮತ್ತು ಕುಟುಂಬದವರೊಬ್ಬರಿಗೆ ಸರ್ಕಾರಿ ನೌಕರಿಯೊಂದನ್ನು ಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ದಲಿತ ಮುಖಂಡರುಗಳಾದ ಅಣ್ಣಯ್ಯ,ವಳಲಹಳ್ಳಿ ವೀರೇಶ್, ಧರ್ಮರಾಜ್ ಕಲ್ಗಣೆ,ಬಸವರಾಜ್ ಬೆಳಗೋಡು, ರಾಮಚಂದ್ರು, ರಮೇಶ್, ಲಕ್ಕಪ್ಪ ಮಾಸ್ಟರ್,ಜಗದೀಶ್ ಮುಂತಾದವರು ಹಾಜರಿದ್ದರು