Sunday, April 20, 2025
Homeಸುದ್ದಿಗಳುಸಕಲೇಶಪುರಒಂದು ಲಕ್ಷ ಹಣವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬೀಡಾ ವ್ಯಾಪಾರಿ

ಒಂದು ಲಕ್ಷ ಹಣವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬೀಡಾ ವ್ಯಾಪಾರಿ

ಒಂದು ಲಕ್ಷ ಹಣವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬೀಡಾ ವ್ಯಾಪಾರಿ
ಸಕಲೇಶಪುರ: ತಾಲ್ಲೂಕಿನ ಹಾನುಬಾಳ್ ನಲ್ಲಿ‌‌ ತಮಿಳುನಾಡಿನಿಂದ ಕಾಫಿ ತೋಟವೊಂದರಲ್ಲಿ ಮರಕೆಲಸ ಮಾಡಲು ಬಂದಿದ್ದ ಶೇಖರ್ ಎಂಬುವರು ಸುಮಾರು ಒಂದು ಲಕ್ಷ ರೂಗಳನ್ನು ಮಾಲಿಕರಿಂದ ಪಡೆದಿದ್ದರು.ಆದರೆ ಹಣವಿಟ್ಟುಕೊಂಡಿದ್ದ ಚೀಲವನ್ನು ಕಳೆದುಕೊಂಡು ಹಾನುಬಾಳ್ ಗ್ರಾಮದ ಹಲವೆಡೆ ಹುಡುಕಿದರು ಸಿಗದೆ ಹತಾಶರಾಗಿದ್ದರು.ಆದರೆ ಅಂತಿಮವಾಗಿ ಹಣವಿದ್ದ ಬ್ಯಾಗ್ ಗ್ರಾಮದ ಬೀಡಾ ವ್ಯಾಪಾರಿ ಶಂಕರಣ್ಣ ಎಂಬುವರಿಗೆ ದೊರಕಿದ್ದು ಈ ಸಂದರ್ಭದಲ್ಲಿ ಹಣ ಇದ್ದ ಬ್ಯಾಗ್ ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

RELATED ARTICLES
- Advertisment -spot_img

Most Popular