ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಕಾಯಕಲ್ಪ ನೀಡಿರುವಂತೆ ಶಾಸಕ ಎಚ್. ಕೆ ಕುಮಾರಸ್ವಾಮಿಗೆ ಮನವಿ.
ಸಕಲೇಶಪುರ : ಶಿಥಿಲವಾಸ್ಥೆಯಲ್ಲಿರುವ ಕಟ್ಟಡದ ದುರಸ್ತಿಗಾಗಿ ಅನುದಾನ ನೀಡುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಶಾಸಕ ಎಚ್ ಕೆ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣ ಮುಂಭಾಗವಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡ ಹಳೆದಾಗಿದ್ದು ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಸಂಘದ ಕಟ್ಟಡ ಸೋರುತ್ತಿದ್ದು ದುರಸ್ತಿಗಾಗಿ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ,
ಕಟ್ಟಡ ದುರಸ್ತಿ ಸಂಬಂಧ ಸಂಸತ್ ಸದಸ್ಯರಾದ ಪ್ರಜ್ಜಲ್ ರೇವಣ್ಣರವರಿಗೆ ಅನುದಾನಕ್ಕಾಗಿ ಈಗಾಗಲೆ ಮನವಿ ಸಲ್ಲಿಸಿದ್ದು, ಶಾಸಕರು ಸಂಸದರ ಗಮನಕ್ಕೆ ತಂದು ಅನುದಾನ ಬಿಡುಗಡೆಗೊಳಿಸಲು ಸಹಕಾರ ನೀಡಬೇಕೆಂದು ಎಂದು ಕೋರಿದರು. ನೌಕರರ ಸಂಘದ ಸ್ಥಗಿತಗೊಂಡಿರುವ ನೂತನ ಕಟ್ಟಡ ಕಾಮಗಾರಿಯನ್ನು ಪ್ರಾರಂಭ ಮಾಡಲು ಉದ್ದೇಶಿಸಿದ್ದು ಸದರಿ ಕಾಮಗಾರಿ ನಡೆಸಲು ಕಟ್ಟಡದ ಮುಂಭಾಗವಿರುವ ತಾತ್ಕಾಲಿಕ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವಂತೆ ಮನವಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಅಕ್ಷರ ದಾಸೋಹ ಇಲಾಖೆಯ ಮಂಜುನಾಥ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಆದಿತ್ಯ, ಹರೀಶ್ ಹಾನುಬಾಳು ಕಂದಾಯ ನಿರೀಕ್ಷಕರಾದ ಚಂದ್ರಶೇಖರ್, ಪಿಡಿಒ ಗಿರೀಶ್ , ಗ್ರಾಮ ಲೆಕ್ಕಿಗರಾದ ಸುನಿಲ್ ಸೇರಿದಂತೆ ಮುಂತಾದವರು ಇದ್ದರು