ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳ ಹಿನ್ನಲೆ ಅರೋಗ್ಯ ಸಚಿವರನ್ನು ದಿಡೀರ್ ಭೇಟಿಯಾದ ಶಾಸಕ ಸಿಮೆಂಟ್ ಮಂಜು.
ಕ್ಷೇತ್ರದ ಪ್ರತಿ ಹೋಬಳಿ ಕೇಂದ್ರದಲ್ಲಿ ದಿನದ 24 ಗಂಟೆಯೂ ಆಂಬುಲೆನ್ಸ್ ಸೇವೆಗೆ ಮನವಿ
ಬೆಂಗಳೂರು : ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಮೂವತ್ತು ಮಂದಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ಪ್ರಕರಣ ಜರುಗಿರುವ ಹಿನ್ನೆಲೆ ಇಂದು ಶಾಸಕ ಸಿಮೆಂಟ್ ಮಂಜು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಇಂದು ಒಂದೇ ದಿನ ಸಕಲೇಶಪುರ ಆಲೂರು ಹಾಗೂ ಕಟ್ಟಾಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ವರು ಹೃದಯಾಘಾರದಿಂದ ಮೃತಪಟ್ಟಿದ್ದು ಕ್ಷೇತ್ರದಿಂದ ಜನ ಸಹಜವಾಗಿಯೇ ಆತಂಕಕ್ಕೆಗಿಡರುವ ಹಿನ್ನಲೆ ಇಂದು ಸಚಿವರ ಕಚೇರಿಯಲ್ಲಿ ದಿಡೀರ್ ಭೇಟಿಯಾಗಿ ಚರ್ಚೆ ನೆಡೆಸಿದರು.ಜಿಲ್ಲೆಯಲ್ಲಿ ಚಿಕ್ಕವಯಸ್ಸಿನವರು ಯಾಕೆ ಹೃದಯಾಘಾತಕ್ಕೊಳಗಾಗುತ್ತಿದ್ದಾರೆ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನುರಿತ ತಜ್ಞರ ಮೂಲಕ ಆದಷ್ಟು ಬೇಗ ಕಂಡುಹಿಡಿಯಬೇಕು ಹೃದಯಘಾತದ ಪ್ರಕರಣ ಯುವಜನತೆಯಲ್ಲಿ ಭಾರೀ ಆತಂಕ ಮೂಡಿದೆ ಎಂದರು. ಪ್ರಕರಣದ ತನಿಖೆಗೆ ಸರ್ಕಾರ ವೈದ್ಯರ ತಂಡ ರಚಿಸಿರುವುದು ತಿಳಿದಿದೆ. ವರದಿಯನ್ನ ಆದಷ್ಟು ಬೇಗ ತರಿಸಿಕೊಂಡು ಹೃದಯಘಾತದ ಪ್ರಕರಣಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಡಂಚಿನ ಗ್ರಾಮಗಳು ಹೆಚ್ಚಾಗಿವೆ ರೋಗಿಗಳು ತುರ್ತು ಚಿಕಿತ್ಸೆಗಾಗಿ 40-50 ಕಿ.ಮೀ ದೂರದಿಂದ ಜಿಲ್ಲಾ ಕೇಂದ್ರಕ್ಕೆ ಬರಬೇಕಾದ ಅನಿವಾರ್ಯತೆ ಇದೆ ಆದ್ದರಿಂದ ಕ್ಷೇತ್ರದ ಪ್ರತಿ ಹೋಬಳಿ ಕೇಂದ್ರದಲ್ಲಿ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಆಂಬುಲೆನ್ಸ್ ವಾಹನಗಳನ್ನು ನೀಡಬೇಕೆಂದು ಮನವಿ ಮಾಡಿದರು.