ನಿರಂತರ ಗುಂಡಿ ಸಮಸ್ಯೆಗೆ ಅಂತ್ಯ ಹಾಡಿದ ಶಾಸಕ ಸಿಮೆಂಟ್ ಮಂಜು.
ಹಾಸನ: ಪ್ರತಿ ಭಾರಿ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ದೊಡ್ಡಮಂಡಿಗನ ಬಳಿ ರೈಲ್ವೆ ಬ್ರಿಡ್ಜ್ ಬಳಿ ಬೃಹತ್ ಗುಂಡಿಯನ್ನು 24 ಗಂಟೆಯೊಳಗೆ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸೋಮವಾರ ಹೆದ್ದಾರಿಯಲ್ಲಿ ಸಂಚಾರಿಸಿದ ಶಾಸಕರು ಗುಂಡಿಯಿಂದ ದಿನನಿತ್ಯ ಅಪಘಾತ, ವಾಹನಗಳು ದುರಸ್ಥಿಗೆ ಒಳಗಾಗುತ್ತಿರುವುದು ಕಂಡ ಶಾಸಕರು ಹಾಸನ ಲೋಕೋಪಯೋಗಿ ಇಲಾಖೆಯ ಹಿರಿಯ ಅಭಿಯಂತ್ರರವರಿಗೆ ದೂರವಾಣಿ ಕರೆ ತಕ್ಷಣವೇ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದರು. ಶೀಘ್ರ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ರೈಲ್ವೆ ಬ್ರಿಡ್ಜ್ ಕೆಳ ಭಾಗದಲ್ಲಿದ್ದ ಗುಂಡಿಗಳನ್ನು ಮುಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.



