- ಸಕಲೇಶಪುರ:ತಾಲೂಕಿನ ಬೈಕೆರೆ ಗ್ರಾಮದಲ್ಲಿರುವ ಕೇಂದ್ರ ಸರ್ಕಾರದ ನಿವೃತ್ತ ರಾಜ್ಯ ವಿಶೇಷ ಸಮನ್ವಯಾಧಿಕಾರಿ ಬೈಕೆರೆ ನಾಗೇಶ್‌ರವರ ನಿವಾಸಕ್ಕೆ ಭೇಟಿ ಮಾಡಿದ ನಂತರ ಗ್ರಾಮದಲ್ಲಿರುವ ಗುಡ್ಡೆ ಬಸವಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಶಾಸಕ ಸಿಮೆಂಟ್ ಮಂಜುರವರು ಮಾತನಾಡಿ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಕ್ಷೇತ್ರದ ಜನ ನಂಬಿಕೆ ಇಟ್ಟು ಶಾಸಕನಾಗಿ ಆಯ್ಕೆ ಮಾಡಿದ್ದಾರೆ.ಬೈಕೆರೆಯಂತಹ ಸಣ್ಣ ಗ್ರಾಮದಲ್ಲಿ ನಾಗೇಶಣ್ಣ ಹುಟ್ಟಿ ದೆಹಲಿಯಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು ಸಹ ಅವರು ಹುಟ್ಟೂರನ್ನು ಎಂದು ಮರೆತಿಲ್ಲ, ನಾವು ಎಲ್ಲಿಂದ ಬಂದೆವು ಎಂಬುದನ್ನು ಯಾರು ಸಹ ಎಂದಿಗೂ ಮರೆಯಬಾರದು. ನನ್ನ ಗೆಲುವಿಗಾಗಿ ನಾಗೇಶಣ್ಣನವರ ಪತ್ನಿ ಸುಗುಣಾ ನಾಗೇಶ್‌ರವರು ದೇವರಿಗೆ ಬೆಳ್ಳಿಯ ಗಂಟೆಯನ್ನು ನೀಡುವುದಾಗಿ ಹರಕೆ ಹೊತ್ತಿಕೊಂಡಿದ್ದು ಇಂದು ಅವರು ಗುಡ್ಡೆ ಬಸವಣ್ಣ ದೇವರಿಗೆ ಬೆಳ್ಳಿಯ ಗಂಟೆಯನ್ನು ನೀಡುವ ಮುಖಾಂತರ ತಮ್ಮ ಹರಕೆಯನ್ನು ಪೂರೈಸಿಕೊಂಡಿದ್ದಾರೆ. ನನ್ನಂತಹ ಸಾಮಾನ್ಯನ ಮೇಲೆ ಅವರಿಗಿರುವ ಪ್ರೀತಿಗೆ ನಾನು ಸದಾ ಚಿರ ಋಣಿಯಾಗಿರುತ್ತೇನೆ. .ನಾಗೇಶಣ್ಣನವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ವೀರಶೈವ ಸಮಾಜದ ಹಿರಿಯ ಮುಖಂಡ ಬ್ಯಾಕರವಳ್ಳಿ ಜಯಣ್ಣ, ಸುಧೀರ್ ಚೆನ್ನಪ್ಪ, ಕೃಷ್ಣೇಗೌಡ, ಮಳಲಿ ಶಿವಣ್ಣ, ಕೌಡಹಳ್ಳಿ ಲೋಹಿತ್, ಸುಧೀಶ್, ರಘು, ಪ್ರಶಾಂತ್, ಶರತ್ , ತೇಜು, ಮುಂತಾದವರು ಹಾಜರಿದ್ದರು.