ಹೆರಿಗೆ ಸಂಧರ್ಭದಲ್ಲಿ ರಕ್ತಸಾವ್ರವಾಗಿ ಕೋಮಾದಲ್ಲಿದ್ದ ಪತ್ರಕರ್ತನ ಮಗಳ ಯೋಗಕ್ಷೇಮ ವಿಚಾರಿಸಿದ ಶಾಸಕ ಸಿಮೆಂಟ್ ಮಂಜು
ಸಕಲೇಶಪುರ: ಕಳೆದ ಎರಡು ವಾರಗಳ ಹಿಂದೆ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಪತ್ರಕರ್ತ ಜಮೀಲ್ ಅಹಮ್ಮದ್‌ರವರ ಮಗಳು ಲುಬನಾ ಸಾಧಿಯಾ ಹೆರಿಗೆಗಾಗಿ ದಾಖಲಾಗಿ ಹೆಣ್ಣು ಮಗುವಿಗೆ ಜನನ ನೀಡಿದ್ದರು. ಮಗು ಆರೋಗ್ಯವಾಗಿದ್ದು ಆದರೆ ಸರಿಯಾದ ಚಿಕಿತ್ಸೆ ದೊರಕದ ಕಾರಣ ತಾಯಿಗೆ ವಿಪರೀತ ರಕ್ತಸಾವ್ರವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಯುವತಿಯ ಪರಿಸ್ಥಿತಿ ಮತ್ತಷ್ಟು ಬಿಗಾಡಿಸಿದ ಪರಿಣಾಮ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯ ಐ.ಸಿ.ಯು ವಾರ್ಡ್‌ನಲ್ಲಿ ದಾಖಲು ಮಾಡಲಾಗಿತ್ತು. ಸುಮಾರು 9 ದಿನಗಳ ಕಾಲ ಕೋಮಾದಲ್ಲಿದ್ದ ಯುವತಿ ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಮೈಸೂರು ಪ್ರವಾಸ ಸಂಧರ್ಭದಲ್ಲಿ ಖುದ್ದು ಆಸ್ಪತ್ರೆಗೆ ಹೋಗಿ ಯುವತಿಯ ಯೋಗಕ್ಷೇಮ ವಿಚಾರಿಸಿ ಯುವತಿಯ ಪೋಷಕರಿಗೆ ಧೈರ್ಯ ತುಂಬಿದರು. ಸದನದಲ್ಲೂ ಸಹ ಇದೇ ವಿಷಯ ಪ್ರಸ್ತಾಪ ಮಾಡಿದ್ದ ಶಾಸಕರು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಹೆಚ್ಚಿನ ವೈದ್ಯರನ್ನು ನೇಮಕಾತಿ ಮಾಡಿ ಇನ್ನು ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದ್ದರು. ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ಕೇಳಿ ಬಂದಿದೆ.