Tuesday, December 3, 2024
Homeಸುದ್ದಿಗಳುಸಕಲೇಶಪುರನೂತನ ನಾಲ್ಕು ಬಸ್ ಮಾರ್ಗಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ.

ನೂತನ ನಾಲ್ಕು ಬಸ್ ಮಾರ್ಗಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ.

ನೂತನ ನಾಲ್ಕು ಬಸ್ ಮಾರ್ಗಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ.

ಸಕಲೇಶಪುರ : ಇಲ್ಲಿನ ರಾಜ್ಯ ರಸ್ತೆ ಸಾರಿಗೆ ನಿಗಮದ ಸಕಲೇಶಪುರ ಡಿಪೋ ದಿಂದ ಗ್ರಾಮೀಣ ಹಾಗೂ ಹೊರ ಜಿಲ್ಲೆಗಳ ನೂತನ ಬಸ್ ಮಾರ್ಗಗಳಿಗೆ ಶಾಸಕ ಸಿಮೆಂಟ್ ಮಂಜುನಾಥ್ ಚಾಲನೆ ನೀಡಿದರು.

ಸೋಮವಾರ ನಗರದ ಬಸ್ ನಿಲ್ದಾಣದಲ್ಲಿ ನಾಲ್ಕು ಹೊಸ ಅಶ್ವಮೇಧ ಬಸ್ ಗಳಿಗೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿದರು.

ನಂತರ ಮಾತನಾಡಿ, ವಿಜಯಪುರ, ಬೆಂಗಳೂರು, ಹಾಸನ ಹಾಗೂ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿದ್ದ ವಳಲಹಳ್ಳಿ, ಕರಡಿಗಾಲ,ಬೊಮ್ಮನಕೆರೆ, ವಡ್ರಹಳ್ಳಿ, ಹರಗರಹಳ್ಳಿ, ನಡನಹಳ್ಳಿ, ನೂದರಹಳ್ಳಿ, ಗ್ರಾಮದ ಜನರಿಗೆ ಸಕಲೇಶಪುರ ಕಡೆ ಹೋಗುವ ಮಾರ್ಗಕ್ಕೆ ಚಾಲನೆ ನೀಡಲಾಗಿದೆ.ಮುಂದಿನ ದಿನಗಳಲ್ಲಿ ಸಕಲೇಶಪುರ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.ಕಳೆದ ಕೋವಿಡ್ ಸಂಧರ್ಭದಲ್ಲಿ ತಾಲೂಕಿನಲ್ಲಿ ಕೆಲವು ಗ್ರಾಮೀಣ ಪ್ರದೇಶಕ್ಕೆ ಬಸ್ ಗಳ ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಬಸ್ ಸೌಲಭ್ಯಕ್ಕೆ ಬೇಡಿಕೆ ಬಂದ ಕಾರಣ 11 ಹೊಸ ಅಶ್ವಮೇಧ ಬಸ್ ಗಳು ಬಂದಿದ್ದು ಆಗತ್ಯಕ್ಕೆ ಅನುಗುಣವಾಗಿ ಮಾರ್ಗಗಳಿಗೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.ಈಗಾಗಲೇ 

ಕ್ಷೇತ್ರದಿಂದ ವಿವಿಧೆಡೆ ಸಂಚರಿಸುವ ಹಳೆ ಬಸ್‌ಗಳನ್ನು ಬದಲಾವಣೆ ಮಾಡಲು ಹಾಗೂ ಹೊಸ ಬಸ್‌ಗಳನ್ನು ಬಿಡುವಂತೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.ಸಾರ್ವಜನಿಕರು ಕರ್ನಾಟಕ ರಾಜ್ಯ ಸಾರಿಗೆ ಬಸ್‌ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಸಕಲೇಶಪುರ ಡಿಪೋ ವ್ಯವಸ್ಥಾಪಕರಾದ ವಿಪಿನ್,ಪುರಸಭಾ ಸದಸ್ಯರಾದ ಪ್ರದೀಪ್ ವನಜಾಕ್ಷಿ , ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಮುಖಂಡರಾದ, ರಾಜಕುಮಾರ್, ಪುನೀತ್, ವಿರೇಶ್ ಮಂಜುನಾಥ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular