Sunday, November 24, 2024
Homeಸುದ್ದಿಗಳುಸಕಲೇಶಪುರಪಟ್ಟಣದಲ್ಲಿ ವಸತಿ ರಹಿತರಿಗೆ ನಿವೇಶನ‌ ಹಂಚಲು ಕ್ರಮ: ಶಾಸಕ ಎಚ್‌.ಕೆ ಕುಮಾರಸ್ವಾಮಿ

ಪಟ್ಟಣದಲ್ಲಿ ವಸತಿ ರಹಿತರಿಗೆ ನಿವೇಶನ‌ ಹಂಚಲು ಕ್ರಮ: ಶಾಸಕ ಎಚ್‌.ಕೆ ಕುಮಾರಸ್ವಾಮಿ

ಪಟ್ಟಣದ ವಸತಿ ನಿವೇಶನ‌ ಹಂಚಲು ಕ್ರಮ: ಶಾಸಕ ಎಚ್‌.ಕೆ ಕುಮಾರಸ್ವಾಮಿ

ಸಕಲೇಶಪುರ: ವಸತಿ ರಹಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡುವ ಸಂಬಂದ ಮಿನಿ ವಿಧಾನಸೌದದಲ್ಲಿ ಶಾಸಕ ಎಚ್ ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಕೆ ಕುಮಾರಸ್ವಾಮಿ ಪಟ್ಟಣದಲ್ಲಿ ಹಲವು ದಶಕಗಳಿಂದ ತಾಂತ್ರಿಕ ಕಾರಣದಿಂದ ಅರ್ಹರಿಗೆ ಸೂರು ಕಲ್ಪಿಸಲು ಸಾಧ್ಯವಾಗಿರಲಿಲ್ಲ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ಅರ್ಹರಿಗೆ ಸೂರು ನೀಡಲು ಪ್ರಯತ್ನ ಪಡುತ್ತೇನೆ. ಸೂರು ನೀಡುವ ಸಂಧರ್ಭದಲ್ಲಿ ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು, ಕೊಳೆಗೇರಿ ನಿವಾಸಿಗಳು, ಬೀದಿ ವ್ಯಾಪಾರಿಗಳು, ಕರಕುಶಲ ಕರ್ಮಿಗಳು, ಆಟೊ ಚಾಲಕರು, ಗುತ್ತಿಗೆ ಪೌರಕಾರ್ಮಿಕರು ಹಾಗೂ ಮನೆಕೆಲಸ ಮಾಡುವ ಕಾರ್ಮಿರಿಗೆ ಆದ್ಯತಾನುಸಾರ ಹಂಚಿಕೆ ಮಾಡ ಬೇಕಾಗುತ್ತದೆ ಎಂದರು.ಹೆಬ್ಬಸಾಲೆಯಲ್ಲಿ ಖರೀದಿ ಮಾಡಿರುವ 16 ಎಕರೆ ಜಾಗದಲ್ಲಿ 5 ಎಕರೆ ಜಾಗದ ಕುರಿತು ನ್ಯಾಯಾಲಯದಲ್ಲಿದೆ. ಆ ಜಾಗದ ಆದೇಶ ಬರೋವರೆಗೂ ಯಾವುದೇ ರೀತಿಯಲ್ಲಿ ನಿವೇಶನ ನೀಡಲು ಆಗೋಲ್ಲ. ಒಟ್ಟು ಉಳಿದ 11ಎಕರೆ ಜಾಗದಲ್ಲಿ ನಿವೇಶನ ರಹಿತರಿಗೆ 20*30 ನಿವೇಶನ ನೀಡಲು ಕ್ರಮ ಕೈ ಗೊಳ್ಳಲಾಗುವುದು ಎಂದರು

ವಸತಿ ರಹಿತರ ಹೋರಾಟ ಸಮಿತಿ ವತಿಯಿಂದ ಸತತವಾಗಿ ಆರು ದಿನಗಳು ಪುರಭವನದ ಮುಂಬಾಗ ವಸತಿ ರಹಿತರಿಗೆ ವಸತಿ ಕಲ್ಪಿಸುವಂತೆ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಶಾಸಕರು ಮುಂದಿನ ದಿನಗಳಲ್ಲಿ ಅಶ್ರಯ ಸಮಿತಿಯ ಸಭೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ಮುಷ್ಕರ ಹಿಂಪಡೆಯಲಾಗಿತ್ತು

ಈ ಸಂಧರ್ಭದಲ್ಲಿ ಪುರಸಭ ಅಧ್ಯಕ್ಷ ಕಾಡಪ್ಪ, ತಹಶೀಲ್ದಾರ್ ಮೇಘನಾಅ ತಾಲ್ಲೂಕು ಕಾರ್ಯನಿರ್ವಣಾಧಿಕಾರಿ ವೆಂಕಟೇಶ್, ಮುಖ್ಯಾಧಿಕಾರಿ ಮಂಜುನಾಥ್, ಕಂದಾಯ ಇಲಾಖೆಯ ಉಮೇಶ್ ಮುಂತಾದವರು ಹಾಜರಿದ್ದರು.

RELATED ARTICLES
- Advertisment -spot_img

Most Popular