ಸಕಲೇಶಪುರ : ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಮಣಿದ ಸಚಿವ ಗೋಪಾಲಯ್ಯ ಸಿಎಂ ಭೇಟಿಗೆ ಅವಕಾಶ ಕಲ್ಪಿಸುತ್ತೇನೆ ಎಂದು ಭರವಸೆ.
ಹೆಬ್ಬನಹಳ್ಳಿಗೆ ಕನ್ನಡಪರ ಸಂಘಟನೆಗಳ ಮುಖಂಡರನ್ನು ಖುದ್ದಾಗಿ ಕರೆಸಿಕೊಂಡು ಚರ್ಚೆ ನಡೆಸಿದ ಸಚಿವರು.
ಸಕಲೇಶಪುರ ಮಲೆನಾಡು ಭಾಗದಲ್ಲಿರುವ ಕಾಡನ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಇಂದು ಬೆಳಗಾರರ ಸಂಘದ ಭವನದಲ್ಲಿ ನಡೆದ ಸಭೆಯ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದರು ಜೊತೆಗೆ ಅನಿರ್ದಿಷ್ಟ ಅವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದ ಕನ್ನಡಪರ ಸಂಘಟನೆಗಳ ಜೊತೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಸಚಿವರು ನವಂಬರ್ 01 ರಂದು ಕಾಡಾನೆಯಿಂದ ಮೃತಪಟ್ಟ ಮನು ಮನೆಗೆ ತೆರಳಿದ ವೇಳೆ ಖುದ್ದಾಗಿ ಕನ್ನಡಪರ ಸಂಘಟನೆಗಳ ಮುಖಂಡರನ್ನು ಬರಲು ಹೇಳಿ ಸುಮಾರು ಅರ್ಧ ಗಂಟೆ ಚರ್ಚೆ ಚರ್ಚೆ ನಡೆಸಿ ಜನಸಂಕಲ್ಪ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ತಮ್ಮ ಮನವಿಯನ್ನು ಅವಕಾಶ ಮಾಡಿಕೊಡುತ್ತೇನೆ ಎಂದು ಅಭಯ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾಡಾನೆ ಹಾವಳಿ ಸಂದರ್ಭದಲ್ಲಿ ಎಡೇಹಳ್ಳಿ ಆರ್ ಮಂಜುನಾಥ್, ಕರ್ನಾಟಕ ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಆರ್ ಎಸ್ ದಿನೇಶ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಸಾಗರ್ ಜಾನಕೆರೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗ ರಮೇಶ್ ಪೂಜಾರಿ, ಕರವೇ ಪದಾಧಿಕಾರಿಗಳಾದ ದರ್ಶನ್ ಪೂಜಾರಿ, ದಿಲೀಪ್, ಕಾಡಾನೆ ಹಾವಳಿ ಸಂತ್ರಸ್ತರ ಸಮಿತಿಯ ಶಶಿಧರ್ ಹೊಸಗದ್ದೆ, ಕೆಲ್ವಳ್ಳಿ ಅಭಿಲಾಶ್ ಸೇರಿದಂತೆ ಮುಂತಾದವರಿದ್ದರು