Monday, April 21, 2025
Homeಸುದ್ದಿಗಳುKSRTC, BMTC ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ ಗೈಡ್ ಲೈನ್ ಗಿಂತ ಮೊದಲೇ ಎಚ್ಚೆತ್ತ...

KSRTC, BMTC ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ ಗೈಡ್ ಲೈನ್ ಗಿಂತ ಮೊದಲೇ ಎಚ್ಚೆತ್ತ ಸಾರಿಗೆ ಸಂಸ್ಥೆ

KSRTC, BMTC ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

ಗೈಡ್ ಲೈನ್ ಗಿಂತ ಮೊದಲೇ ಎಚ್ಚೆತ್ತ ಸಾರಿಗೆ ಸಂಸ್ಥೆ

ರಾಜ್ಯದಲ್ಲಿ ಕೊರೊನಾ ರೂಪಾಂತರಿ BF.7 ವೈರಸ್ ಹರಡುವ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕೆ.ಎಸ್.ಆರ್.ಟಿ.ಸಿ ಬಸ್, ಬಿಎಂಟಿಸಿ ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ.

ರಾಜ್ಯದಲ್ಲಿ ಇಂದಿನಿಂದಲೇ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ಜಾರಿಗೊಳಿಸಲಾಗಿದ್ದು, ಮಾಸ್ಕ್ ಇಲ್ಲದೇ ಪ್ರಯಾಣಿಕರನ್ನು ಬಸ್ ಗೆ ಹತ್ತಿಸಿಕೊಳ್ಳುವಂತಿಲ್ಲ ಎಂದು ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ನಿನ್ನೆಯಿಂದಲೇ ಮಾಸ್ಕ್ ಕಡ್ಡಾಯ ಜಾರಿಗೊಳಿಸಲಾಗಿದೆ. ಮಾರುಕಟ್ಟೆ, ಮಾಲ್, ಥಿಯೇಟರ್, ಹೊಟೇಲ್, ಜನನಿಬಿಡ ಪ್ರದೇಶಗಳಲ್ಲಿ ಬಿಬಿಎಂಪಿ ಮಾರ್ಷಲ್ ಗಳು ಮೈಕ್ ಮೂಲಕ ಮಾಸ್ಕ್ ಧರಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಒಟ್ಟಾರೆ ರಾಜ್ಯ ಸರ್ಕಾರದ ಗೈಡ್ ಲೈನ್ ಪ್ರಕಟವಾಗುವ ಮೊದಲೇ ಎಲ್ಲರೂ ಜಾಗೃತರಾಗಿದ್ದು, ಕೊರೊನಾ ತಡೆಗೆ ಮುಂಜಾಗೃತೆ ನಿಟ್ಟಿನಲ್ಲಿ ಮಾಸ್ಕ್ ಧರಿಸಲು ಆರಂಭಿಸಿದ್ದಾರೆ

RELATED ARTICLES
- Advertisment -spot_img

Most Popular