ಸಕಲೇಶಪುರ: ಪಟ್ಟಣದ ಜೈನ್ ಮಂದಿರದಲ್ಲಿ ಶನಿವಾರ ತಾಲೂಕು ವರ್ತಕರ ಸಂಘದಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕ ಸಿಮೆಂಟ್ ಮಂಜುರವರಿಗೆ ಅಭಿನಂದನೆ ಸಮಾರಂಭ ನಡೆಸಲಾಯಿತು. ಸಂಘದಿಂದ ವರ್ತಕರಿಗೆ ಆಗುತ್ತಿರುವ ಕೆಲ ಸಮಸ್ಯೆ ಗಳನ್ನು ಮನವರಿಕೆ ಮಾಡಲಾಯಿತು. ಅಭಿನಂದನೆ ಸನ್ಮಾನ ಸ್ವೀಕರಿಸಿ ಮಾತನಾಡಿ ಶಾಸಕ ಸಿಮೆಂಟ್ ಮಂಜುಮಾತನಾಡಿ ಶಾಸಕನಾಗುವ ಮೊದಲು ವರ್ತಕನಾಗಿದ್ದು ಹೀಗಾಗಿ ಪಟ್ಟಣದ ವರ್ತಕರ ಸಮಸ್ಯೆಗಳ ಕುರಿತು ನನಗೆ ಅರಿವಿದೆ. ಕಿರಿದಾದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ , ಬೀದಿ ದೀಪಗಳ ಸಮಸ್ಯೆ ಸೇರಿದಂತೆ ಇನ್ನು ಹಲವು ಸಮಸ್ಯೆಗಳನ್ನು ವರ್ತಕರು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ವರ್ತಕರ ಸಮಸ್ಯೆಗಳನ್ನು ಬಗೆಹರಿಸಲು ವರ್ತಕರ ಸಲಹೆ ಪಡೆದೆ ಪ್ರಾಮಾಣಿಕವಾಗಿ ಮುಂದಾಗುತ್ತೇನೆ ಎಂದರು.
ಈ ಸಂಧರ್ಭದಲ್ಲಿ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಉದಯ್, ಕಾರ್ಯದರ್ಶಿ ಮಧುಕುಮಾರ್ ಖಚಾಂಚಿ ಎಚ್.ಆರ್ ಮಂಜುನಾಥ್, ಪುರಸಭೆ ಸದಸ್ಯ ಪ್ರದೀಪ ವರ್ತಕರ ಸಂಘದ ಮುಖಂಡರುಗಳಾದ ರಾಜ್ಕುಮಾರ್, ರವಿರಾಜ್, ಪ್ರವೀಣ್, ಗೌತಮ್, ನಿರ್ದೇಶಕರಾದ ಲೋಹಿತ್, ಪ್ರಶಾಂತ್, ಕಾರ್ತಿಕ್, ಗೌತಮ್ ,ಪ್ರವೀಣ್ ಜೈ, ರಾಜಕುಮಾರ್, ರೋಹಿತ್, ಜವಾಹರ್ ಜೈನ್ ಉಪಸ್ಥಿತರಿದ್ದರು.