ಸಕಲೇಶಪುರ: ಮಳಲಿ ಗ್ರಾ.ಪಂಯಲ್ಲಿ ಬುಧವಾರ ಕರೆಯಲಾಗಿದ್ದ ಪಂಚಾಯತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಬಹುತೇಕ ಇಲಾಖೆ ಅಧಿಕಾರಿಗಳ ಗೈರು ಹಾಜರಿಂದ ಸಭೆ ಮುಂದೂಡಲಾಯಿತು.
ಮಳಲಿ ಗ್ರಾ.ಪಂ ಅಧ್ಯಕ್ಷ ಸತೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾ.ಪಂ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒಟ್ಟು 19 ಇಲಾಖೆಗಳ ಅಧಿಕಾರಿಗಳು ಹಾಜರಾಗಬೇಕಾಗಿದ್ದು ಆದರೆ ಚೆಸ್ಕಾಂ, ಸಿಡಿಪಿಓ, ತೋಟಗಾರಿಕೆ, ಆರೋಗ್ಯ, ಪಶು ವೈದ್ಯ,ಸಾಮಾಜಿಕ ಅರಣ್ಯಗಳ ಒಟ್ಟು 6 ಇಲಾಖೆಗಳ ಅಧಿಕಾರಿಗಳು ಹಾಜರಾಗಿ ಇತರ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಸಭೆ ಮುಂದೂಡಲಾಯಿತು. ಗೈರು ಹಾಜರಾದ ಇಲಾಖೆ ಅಧಿಕಾರಿಗಳಿಗೆ ಅಧ್ಯಕ್ಷರ ಮುಖಾಂತರ ನೋಟಿಸ್ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಪಿಡಿಓ ರಂಗಸ್ವಾಮಿ, ಉಪಾಧ್ಯಕ್ಷೆ ಅಣ್ಣಮ್ಮ, ಸದಸ್ಯರುಗಳಾದ ಶಿವಕುಮಾರ್, ರವಿ ಸೇರಿದಂತೆ ಎಲ್ಲಾ ಸದಸ್ಯರುಗಳು ಹಾಜರಿದ್ದರು.