Saturday, November 23, 2024
Homeಸುದ್ದಿಗಳುಸಕಲೇಶಪುರಹಾಸನ ಜಿಲ್ಲೆಯ ಕಾಂಗ್ರೆಸ್ನ ಏಕೈಕ ಶಾಸಕ* ಶಿವಲಿಂಗೇಗೌಡರನ್ನು  ಅರಣ್ಯ ಸಚಿವರನ್ನಾಗಿ ಮಾಡಿ.

ಹಾಸನ ಜಿಲ್ಲೆಯ ಕಾಂಗ್ರೆಸ್ನ ಏಕೈಕ ಶಾಸಕ* ಶಿವಲಿಂಗೇಗೌಡರನ್ನು  ಅರಣ್ಯ ಸಚಿವರನ್ನಾಗಿ ಮಾಡಿ.

ಹಾಸನ ಜಿಲ್ಲೆಯ ಕಾಂಗ್ರೆಸ್ನ ಏಕೈಕ ಶಾಸಕ* ಶಿವಲಿಂಗೇಗೌಡರನ್ನು  ಅರಣ್ಯ ಸಚಿವರನ್ನಾಗಿ ಮಾಡಿ.

 ಮುಂದಿನ ಜನಾಂಗಕ್ಕೆ ಬಹುಮುಖ್ಯವಾಗಿ ಉಳಿಸಿ ಹೋಗಬೇಕಾದ ಅರಣ್ಯ ಮತ್ತು ಪರಿಸರದ ಬಗ್ಗೆ ಜ್ಞಾನವಿದ್ದು ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷವನ್ನು ಹತ್ತಿಕ್ಕಿ. ಕಾಡುಪ್ರಾಣಿಗಳು ಬದುಕಲಿ ಬಾಳಲಿ ಕಾಡಿನಲ್ಲಿ, ಮನುಷ್ಯರು ಬದುಕಲಿ ಬಾಳಲಿ ನಾಡಿನಲ್ಲಿ ಎಂಬ ಅರಿವಿರುವರನ್ನು, ಅತಿ ಹೆಚ್ಚು ಅರಣ್ಯ ಹಾಗೂ ಕಾಡುಪ್ರಾಣಿ ಮಾನವ

ಸಂಘರ್ಷದ ಸಮಸ್ಯೆ ಇರುವ ಜಿಲ್ಲೆಯವರಾದ, ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಶಾಸಕರಾದ ಶಿವಲಿಂಗೇಗೌಡರನ್ನು ಅರಣ್ಯ ಮಂತ್ರಿಗಳನ್ನಾಗಿ ಮಾಡಿ, ಹಾಸನ ಜಿಲ್ಲೆಗೆ ಪ್ರಾತಿನಿಧ್ಯ ನೀಡಿದ ಹಾಗೆ ಆಗುತ್ತದೆ.ತಮ್ಮ ಕ್ಷೇತ್ರದ ಬಹುದೊಡ್ಡ ಸಮಸ್ಯೆಯಾಗಿರುವ ಕಾಡಾನೆ ಮಾನವ ಸಂಘರ್ಷ ನಾವು ಪರಿಹರಿಸಿಕೊಳ್ಳದೆ ಬಿಡುವುದಿಲ್ಲ.

ಅರಣ್ಯ ಪರಿಸರ ಕಾಡು ಪ್ರಾಣಿಗಳ ಬಗ್ಗೆ ಕಾಳಜಿ ಇಲ್ಲದವರು,ಸಂಬಂಧವಿಲ್ಲದವರು, ವರ್ಷಕ್ಕೆ ನಾಲ್ಕು ಜನ ಅರಣ್ಯ ಸಚಿವರಾದರು ಕಳೆದ ಸರ್ಕಾರದಲ್ಲಿ,ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ಕರ್ತವ್ಯ ನಿರ್ವಹಿಸಿ,ಉತ್ತರ ಕರ್ನಾಟಕದ ಗಣಿಯ ಮೇಲೆ ಕಣ್ಣಿಟ್ಟು ಹಣ ಮಾಡಿಕೊಂಡು ಹೋಗುತ್ತಿದ್ದಾರೆ.ಆಲೂರು- ಸಕಲೇಶಪುರ ತಾಲೂಕಿನಲ್ಲಿ ಮೂರ್ನಾಲ್ಕು ದಶಕದಿಂದಲೂ ಕಾಡಾನೆಗಳ ಹಾವಳಿಯಿದ್ದು,ಇತ್ತಿಚಿನ ದಿನದಲ್ಲಿ ಗ್ರಾಮೀಣ ಭಾಗದ ಜನರ ಜೀವಕ್ಕೂ ಸಂಚಕಾರ ತಂದೊಡ್ಡಿದೆ.ಕಾಡಾನೆ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಜನತೆ ಹೋರಾಟಕ್ಕೆ ಇಳಿದಾಗ ಅರಣ್ಯ ಇಲಾಖೆ ಒಂದೆರಡು ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸುತ್ತದೆ, ರೇಡಿಯೋ ಕಾಲರ್ ಅಳವಡಿಸುತ್ತಿದೆ ಇದರಿಂದ ಯಾವುದೇ ಪ್ರಯೋಜನವಿಲ್ಲ.ಶಾಶ್ವತ ಪ್ರಯೋಜನವಾಗುವ ರೈಲ್ವೆ ಬ್ಯಾರಿಕೇಡ್ ಅಳವಡಿಕೆಯೊ ಅಥವಾ ಆನೆ ಕಾರಿಡಾರ್ ನಿರ್ಮಾಣವೋ ಯಾವುದನ್ನಾದರೂ ನಮ್ಮ ಜಿಲ್ಲೆಯ

ಸಚಿವರುಗಳು ಕೈಲಿ ಹೋರಾಟ ಮಾಡಿ ಮಾಡಿಸಿಕೊಳ್ಳುತ್ತೇವೆ.ನಿರಂತರ ರೈತರು ಬೆಳೆದ ಬೆಳೆಯನ್ನು ಹಾನಿಮಾಡಿ,ಗ್ರಾಮಸ್ಥರನ್ನು ಬಲಿ ಪಡೆಯುತ್ತಿವೆ.ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸರ್ಕಾರಗಳು ರೈತರಿಗೆ ಮುಳುವಾಗಿರುವುದು ಕಂಟಕವಾಗಿದೆ.ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಹೋರಾಟ ನಡೆಯಲಿದೆ. ಆದುದರಿಂದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆರವರು ಹಾಗೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಸಿದ್ದರಾಮಯ್ಯನವರು ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಮಾಧ್ಯಮದ ಮೂಲಕ ಹಾಗು ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗುತ್ತಿದೆ.

 

ಯಡೇಹಳ್ಳಿ”ಆರ್”ಮಂಜುನಾಥ್. ಕೆಪಿಸಿಸಿ ಸದಸ್ಯರು ಸಕಲೇಶಪುರ,

RELATED ARTICLES
- Advertisment -spot_img

Most Popular