Saturday, November 23, 2024
Homeಸುದ್ದಿಗಳುಕಸದ ರಾಶಿಯಲ್ಲಿ ಜಾತ್ರೆ ಮಾಡಲು ಮುಂದಾದರೆ ಪುರಸಭೆ ಮುಂದೆ ಕಸ ಸುರಿದು ಪ್ರತಿಭಟನೆ: ಕರವೇ ಪ್ರವೀಣ್...

ಕಸದ ರಾಶಿಯಲ್ಲಿ ಜಾತ್ರೆ ಮಾಡಲು ಮುಂದಾದರೆ ಪುರಸಭೆ ಮುಂದೆ ಕಸ ಸುರಿದು ಪ್ರತಿಭಟನೆ: ಕರವೇ ಪ್ರವೀಣ್ ಶೆಟ್ಟಿ ಬಣ ಎಚ್ಚರಿಕೆ

 

ಸಕಲೇಶಪುರ : ಸುಭಾಷ್ ಮೈದಾನದಲ್ಲಿ ಪುರಸಭೆಯವರು ಸುರಿದಿರುವ ಕಸವನ್ನು ವಿಲೇವಾರಿ ಮಾಡದೆ ಯಾವುದೇ ಕಾರಣಕ್ಕೂ ಜಾತ್ರೆ ನಡೆಸಲು ಬಿಡುವುದಿಲ್ಲ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ರಮೇಶ್ ಪೂಜಾರಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹಲವು ತಿಂಗಳಿನಿಂದ ಪುರಸಭೆ ಕಸವಿಲೇವಾರಿ ಮಾಡುತ್ತಿದ್ದು, ಇದರಿಂದ ಸುಭಾಷ್ ಮೈದಾನದ ಸುತ್ತಮುತ್ತ ಮಲೀನವಾಗುತ್ತಿದೆ ಮತ್ತು ಸುತ್ತಮುತ್ತಲ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು. ಕಳೆದ ವರ್ಷ ಕಸ ವಿಲೇವಾರಿ ಮಾಡದೆ ಗಬ್ಬುನಾಥದ ನಡುವೆ ಪುರಸಭೆಯವರು ಜಾತ್ರೆ ನಡೆಸಿದ್ದರು. ಈ ಬಾರಿ ಈ ಕಸದ ನಡುವೇ ಜಾತ್ರೆ ನಡೆಸಲು ಸಜ್ಜಾಗುತ್ತಿದ್ದು ಕಸದ ನಡುವೆ ಜಾತ್ರೆ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.

ಹಸಿ ಮತ್ತು ಒಣ ಕಸವನ್ನು ವಿಂಗಡನೆ ಮಾಡದೆ ಕಸ ಸುರಿಯುತ್ತಿರುವುದರಿಂದ ಜಾನುವಾರುಗಳು ಪ್ಲಾಸ್ಟಿಕ್ ಸೇರಿದಂತೆ ಎಲ್ಲಾ ತ್ಯಾಜ್ಯವನ್ನು ತಿಂದು ಕಾಯಿಲೆ ಬಿದ್ದು ಸಾಯುತ್ತಿದ್ದರು ಇತ್ತ ಕಡೆ ಗಮನ ಹರಿಸದೆ ಪುರಸಭೆ ಕಸ ವಿಲೇವಾರಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು. ದೇಶವು ಸ್ವಚ್ಚ ಭಾರತ ಎಂಬ ಘೋಷಣೆಯಲ್ಲಿ ಮುನ್ನುಗ್ಗುತ್ತಿದ್ದರೆ ಇದ್ಯಾವುದಕ್ಕು ನಮಗೂ ಸಂಬಂಧವಿಲ್ಲ ಎಂದು ಪಟ್ಟಣ ಪುರಸಭೆ ಕುಳಿತಿದೆ. ಪಕ್ಕದಲ್ಲಿ ತಾಲ್ಲೂಕಿನ ಏಕೈಕ ಕ್ರೀಡಾಂಗಣವಿದ್ದು ಹಿರಿಯರು ವಾಯು ವಿಹಾರಕ್ಕೆ ಬರುತ್ತಿಲ್ಲ, ಮಕ್ಕಳು ಕ್ರೀಡಾಪಟುಗಳು ಗಬ್ಬು ವಾಸನೆಯ ನಡುವೆ ಕ್ರೀಡೆ ಆಡುತ್ತಾರೆ.‌ ಇಷ್ಟೆಲ್ಲ ಅವ್ಯವಸ್ಥೆ ನಡುವೆ ಪುರಸಭೆಯವರು ಜಾತ್ರೆ ನಡೆಸಲು ಮುಂದಾದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ಪಟ್ಟಣದ ಜನರನ್ನು ಇಂತಹ ದುಸ್ಥಿಗೆ ತಳ್ಳಿರುವ ಪುರಸಭೆ ಸಂಘ ಸಂಸ್ಥೆಯ ದಶಕದ ಹೋರಾಟಕ್ಕೆ ಯಾವುದೇ ಕವಡೆ ಕಾಸಿನ ಗಮನ ನೀಡುತ್ತಿಲ್ಲ, ಕೂಡಲೇ ಇಲ್ಲಿ ಕಸ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಬೇಕು, ಸುರಿದಿರುವ ಕಸವನ್ನು ವಿಲೇವಾರಿ ಮಾಡಿ ಜಾತ್ರೆ ನಡೆಸಬೇಕು ಎಂದು ಒತ್ತಾಯಿಸಿದರು.

RELATED ARTICLES
- Advertisment -spot_img

Most Popular