ಆಲೂರು :ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಂಜಿಹಳ್ಳಿ ಗ್ರಾಮದಲ್ಲಿ ಮನೆ ಬಳಿ ಗುಡ್ಡೆಹಾಕಿದ್ದ ಮೆಕ್ಕೆಜೋಳಕ್ಕೆ ಆಕಸ್ಮಿಕ ಬೆಂಕಿ ತಗುಲಿ 6 ಲಕ್ಷ ಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ಗ್ರಾಮದ ರಂಗಮ್ಮ ಅವರ ಮಗ ಯೋಗೇಶ್ ಎಂಬುವವರಿಗೆ ಸೇರಿದ ಹನ್ನೆರಡು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಮೇತೆ ಸಮೇತ ಮನೆ ಬಳಿ ಗುಡ್ಡೆ ಹಾಕಲಾಗಿತ್ತು.ಶುಕ್ರವಾರ ಮದ್ಯರಾತ್ರಿ 12.15 ರ ವೇಳೆ ಆಕಸ್ಮಿಕವಾಗಿ ಗುಡ್ಡೆಗೆ ಬೆಂಕಿ ತಗುಲಿದೆ ಬೆಂಕಿ ರಭಸದ ಶಬ್ದಕ್ಕೆ ಮನೆ ಯಜಮಾನ ಯೋಗೇಶ್ ಎದ್ದು ನೋಡಿದಾಗ ಸಂಪೂರ್ಣವಾಗಿ ಹತ್ತಿಕೊಂಡಿದ್ದು ಇದನ್ನು ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಸುಮಾರು 400 ಕ್ವಿಂಟಾಲ್ ಗೂ ಹೆಚ್ಚು ಮೆಕ್ಕೆಜೋಳ ಸಂಪೂರ್ಣವಾಗಿ ಸುಟ್ಟು ಹೋಗಿದೆ ಹೇಳಲಾಗುತ್ತಿದೆ ಸ್ಥಳಕ್ಕೆ ಶಾಸಕ ಹೆಚ್.ಕೆ.ಕುಮಾರಸ್ವಾಮಿ,ತಹಶಿಲ್ದಾರ್ ಕೆ.ಸಿ.ಸೌಮ್ಯ ಜಿಲ್ಲಾ ಎಪಿಎಂಸಿ ನಿರ್ದೇಶಕ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ರೈತ ಯೋಗೇಶ್ ಹಾಗೂ ಅವರ ಕುಟುಂಬ ಸಾಲ ಮಾಡಿ ವರ್ಷಲ್ಲಾ ಕಷ್ಟಪಟ್ಟು ಬೆಳೆದ ಮೆಕ್ಕೆಜೋಳ ರಾತ್ರಿ ಬೆಂಕಿಗೆ ಆಹುತಿಯಾಗಿದೆ ಮಾಡಿದ ಸಾಲ ಹೇಗೆ ತೀರಿಸುವುದು ಮುಂದೇನು ಎನ್ನುವುದೇ ತೋಚುತ್ತಿಲ್ಲ ನಮಗೆ ಉಳಿದಿರುವುದು ಒಂದೇ ದಾರಿ ಅದು ಆತ್ಮಹತ್ಯೆ ಎಂದು ಕಣ್ಣೀರು ಸುರಿಸಿದರು.
ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ ಹಾಂಜಿಹಳ್ಳಿ ಗ್ರಾಮದ ರಂಗಮ್ಮ ಅವರ ಆಕಸ್ಮಿಕ ಬೆಂಕಿಯಿಂದ ಸುಮಾರು ಹನ್ನೆರಡು ಎಕರೆಯಲ್ಲಿ ಬೆಳೆದ ಮೆಕ್ಕೆಜೋಳ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಸುಮಾರು ಎಂಟರಿಂದ ಹತ್ತು ಲಕ್ಷ ರೂ ನಷ್ಟು ಆಗಿರಬಹುದು ಈ ಬಗ್ಗೆ ತಹಶಿಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಸೂಚಿಸಲಾಗಿದೆ. ಮುಖ್ಯಮಂತ್ರಿ ಬಳಿ ಕೂತು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ,ಬೈರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಡಿ.ಅಶೋಕ್,ಜೆಡಿಎಸ್ ಮುಖಂಡ ಮಂಜೇಗೌಡ,ಹಾಗೂ ಇತರರು ಇದ್ದರು.