

ಸಕಲೇಶಪುರ: ಪಟ್ಟಣದ ಬ್ರಾಹ್ಮಣರ ಸಂಘದಲ್ಲಿ ಮಧ್ವ ಜಯಂತಿ ಕಾರ್ಯಕ್ರಮ ನಡೆಯಿತು.ಮಧ್ವ ಜಯಂತಿ ಅಂಗವಾಗಿ ವಿಪ್ರ ಮಹಿಳಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.ಈ ಸಂಧರ್ಭದಲ್ಲಿ ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷೆ ಕುಸುಮ ಪ್ರಕಾಶ್,ಕಾರ್ಯದರ್ಶಿ ನಿರ್ಮಲಾ, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ವಿ ಶ್ರೀನಿವಾಸ್ ಮೂರ್ತಿ, ಕಾರ್ಯದರ್ಶಿ ವೆಂಕಟೇಶ್ ಹತ್ವಾರ್, ಆರ್.ಎನ್ ಶಿವಶಂಕರ್ ಮುಂತಾದವರು ಹಾಜರಿದ್ದರು.


                                    
