Sunday, November 24, 2024
Homeಸುದ್ದಿಗಳುಸಕಲೇಶಪುರನ.12 ರಿಂದ ಸಕಲೇಶಪುರದಲ್ಲಿ ಮಧ್ಯವರ್ಜನ ಶಿಬಿರ||ಯೋಜನಾಧಿಕಾರಿ ಭಾಸ್ಕರ್ ರವರಿಂದ ಮಾಹಿತಿ

ನ.12 ರಿಂದ ಸಕಲೇಶಪುರದಲ್ಲಿ ಮಧ್ಯವರ್ಜನ ಶಿಬಿರ||ಯೋಜನಾಧಿಕಾರಿ ಭಾಸ್ಕರ್ ರವರಿಂದ ಮಾಹಿತಿ

ನ.12 ರಿಂದ ಸಕಲೇಶಪುರದಲ್ಲಿ ಮಧ್ಯವರ್ಜನ ಶಿಬಿರ:ಇಂದು ವ್ಯವಸ್ಥಾಪನ ಸಮಿತಿ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಇವರ ಆಶ್ರಯದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಶೌರ್ಯ ವಿಪತ್ತು ನಿರ್ವಹಣ ಸಮಿತಿ ಒಕ್ಕೂಟದ ಪ್ರತಿನಿಧಿಗಳು ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಬೆಳ್ತಂಗಡಿ ವಿಸ್ತರಣ ಕಾರ್ಯಕ್ರಮದ ಅಂಗವಾಗಿ ಸಕಲೇಶಪುರದಲ್ಲಿ ಮದ್ಯವರ್ಜನ ಶಿಬಿರವು ನವಂಬರ್ 12 ನೇ ತಾರೀಖಿನಿಂದ ನಡೆಯಲಿದೆ ಎಂದು ಮೈಸೂರು ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ತಿಳಿಸಿದರು.

ಈ ವೇಳೆ ಮಾತನಾಡಿದ ಭಾಸ್ಕರ್ ರವರು,ಇದೂವರೆಗೂ 1605 ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಲಾಗಿದೆ.ಇದರಲಿ 1.36 ಲಕ್ಷ ಜನರು ವ್ಯಸನ ಮುಕ್ತರಾಗಿದ್ದಾರೆ.ಶೇ 60 ರಷ್ಟು ಮದ್ಯಪಾನದಿಂದ ದೂರವಿದ್ದು ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.ಸಕಲೇಶಪುರದಲ್ಲಿ 8 ದಿನಗಳ ವರೆಗೂ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.

 

ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರಾಗಿ ಜೈನ ಸಮುದಾಯದ ಮುಖಂಡ ವಿಜಯ್ ರಾಜ್ ಅಯ್ಕೆಯಾದರು,ಗೌರವಧ್ಯಾಕ್ಷರಾಗಿ ದೇವರಾಜ್(ನಂದಿಕೃಪ ರಾಜು),ಕೋಶದ್ಯಾಕ್ಷರಾಗಿ ಉದ್ಯಮಿಗಳಾದ ಸಿಮೆಂಟ್ ಮಂಜುನಾಥ್ ಸೇರಿದಂತೆ ಉಪಧ್ಯಾಕ್ಷರು,ಕಾರ್ಯದರ್ಶಿ,ಸಹಕಾರ್ಯದರ್ಶಿ, ಸಲಹೆಗಾರರು,ಗೌರವ ಸಲಹೆಗಾರನ್ನು ಈ ವೇಳೆ ಅಯ್ಕೆ ಮಾಡಲಾಯಿತು.

RELATED ARTICLES
- Advertisment -spot_img

Most Popular