ನಟ ದರ್ಶನ್ ಪರ ಬ್ಯಾಟಿಂಗ್ ಮಾಡಿದ ಮದ್ದೂರು ಶಾಸಕ ಉದಯ್ ಗೌಡ..?
ಬೆಂಗಳೂರು : ಪೊಲೀಸರ ತನಿಖೆ ಹಂತದ ನಡುವೆಯೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮದ್ದೂರು ಕಾಂಗ್ರೆಸ್ ಶಾಸಕ ಉದಯ್ ಗೌಡ ಅವರು ಕ್ಲೀನ್ ಚಿಟ್ ನೀಡುವ ರೀತಿ ಹೇಳಿಕೆ ನೀಡಿದ್ದಾರೆ. ನಟ ದರ್ಶನ್ ಕೃತ್ಯದ ಸಮರ್ಥನೆಗೆ ಮುಂದಾದ ಶಾಸಕ ಉದಯ್ ಗೌಡ ಅವರು, ದರ್ಶನ್ ಗೆ ಸ್ವಲ್ಪ ಮುಂಗೋಪ ಸಿಟ್ಟು ಜಾಸ್ತಿ, ಆದರೆ ಕೊಲೆ ಮಾಡುವವನಲ್ಲ. ಆತ ಅಭಿಮಾನಿಗಳ ಬಳಿ ಮಾಧ್ಯಮದವರ ಬಳಿ ಸ್ವಲ್ಪ ಮುಂಗೋಪದಿಂದ ಮಾತನಾಡುತ್ತಾನೆ ಅಷ್ಟೇ. ಸದ್ಯಕ್ಕೆ ಪೋಲೀಸ್ ತನಿಖೆ ನಡೆಯುತ್ತಿದೆ, ತನಿಖೆ ಮುಗಿದ ಮೇಲೆ ಮಾತಾಡೋಣಾ ಎಂದು ಹೇಳಿದರು.
ದರ್ಶನ್ ತುಂಬಾ ಸಿಡುಕು,ಸಿಟ್ಟು ಸ್ವಭಾವದವರು. ನನಗೆ ಹಲವು ವರ್ಷಗಳಿಂದ ದರ್ಶನ್ ಸ್ನೇಹಿತ, ಆದರೆ ಈ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಜೊತೆಗಿರುವವರು ಮಾಡಿದ್ರಾ? ಇವರ ಮೇಲೆ ಏನಾದರೂ ಹಾಕಿದ್ರಾ ಗೊತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು, ನಾನು ಈಗಲೇ ಏನನ್ನೂ ಹೇಳೋಕೆ ಆಗಲ್ಲ. ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ, ತನಿಖೆ ಆಗಿ ಸತ್ಯ ಹೊರಗೆ ಬರಲಿ. ಇನ್ನೇನು ಕೆಲವೇ ದಿನಗಳಲ್ಲಿ ಏನು ಅಂತ ಹೊರಬರುತ್ತೆ. ರಾಜ್ಯದ ಜನರಿಗೂ ಗೊತ್ತಾಗುತ್ತದೆ, ನಾವ್ಯರೂ ದರ್ಶನ್ ರಕ್ಷಣೆ ಮಾಡುವಂತೆ ಸಿಎಂ ಬಳಿ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಪ್ರಕರಣದ ನಡೆದು 15 ದಿನ ಆಗಿದೆ, ಒಂದು ವೇಳೆ ಆ ರೀತಿ ಮಾಡಿದರೆ ಹೀಗೆ ನಡೆಯುತ್ತಿರಲಿಲ್ಲ. ಗನ್ ಮ್ಯಾನ್ ಮೇಲೆ ದರ್ಶನ್ ಬೆಂಬಲಿಗರ ಹಲ್ಲೆ ಅನ್ನೋದು ನನಗೆ ಗೊತ್ತಿಲ್ಲ. ಅದೆಲ್ಲವೂ ಸುಳ್ಳು, ನನಗೆ ಐದಾರು ಮಂದಿ ಗನ್ ಮ್ಯಾನ್ ಇದ್ದಾರೆ. ಹಲ್ಲೆ ಮಾಡಿದ್ದರೆ ನನಗೆ ಗೊತ್ತಾಗುತ್ತಿರಲಿಲ್ವೇ? ಅಂತಾದ್ದೂ ಯಾವುದೂ ಆಗಿಲ್ಲ. ಅದೆಲ್ಲವೂ ಸುಳ್ಳು ಸೃಷ್ಟಿಯಷ್ಟೇ ಎಂದು ಶಾಸಕರು ತಿಳಿಸಿದರು.