Sunday, April 13, 2025
Homeಸುದ್ದಿಗಳುರಾಜ್ಯನಟ ಲೋಹಿತಾಶ್ವ ಇನ್ನಿಲ್ಲ ಅನಾರೋಗ್ಯದಿಂದ ನಿಧನ

ನಟ ಲೋಹಿತಾಶ್ವ ಇನ್ನಿಲ್ಲ ಅನಾರೋಗ್ಯದಿಂದ ನಿಧನ

Actor Lohitashwa | ಹಿರಿಯ

ನಟ ಲೋಹಿತಾಶ್ವ ಇನ್ನಿಲ್ಲ ಅನಾರೋಗ್ಯದಿಂದ ನಿಧನ

ಕನ್ನಡ ಚಿತ್ರರಂದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ನಟ ಲೋಹಿತಾಶ್ವ (Actor Lohitashwa) ಅವರು ಅನಾರೋಗ್ಯದಿಂದ ಮಂಗಳವಾರ (ನ.8) ನಿಧನರಾಗಿದ್ದಾರೆ.

ಬೆಂಗಳೂರು: ಪೋಷಕ ಪಾತ್ರಧಾರಿಯಾಗಿ, ಖಳನಟನಾಗಿ ತಮ್ಮ ವಿಭಿನ್ನ ನಟನೆ, ವಿಶಿಷ್ಟ ಧ್ವನಿಯ ಮೂಲಕವೇ ಎಲ್ಲರನ್ನೂ ಆಕರ್ಷಿಸಿದ್ದ ಹಿರಿಯ ನಟ ಲೋಹಿತಾಶ್ವ (80) (Actor Lohitashwa) ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ನೂರಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದ್ದರು.

ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ನಟ ಲೋಹಿತಾಶ್ವ ವೆಂಟಿಲೇಟರ್ ಮೂಲಕವೇ ಉಸಿರಾಡುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮಂಗಳವಾರ (ನ. 8) ನಿಧನರಾದರು.

ಸಂಜೆ 7.30ರ ನಂತರ ಕುಮಾರಸ್ವಾಮಿ ಲೇಔಟ್‌ಗೆ ಮೃತದೇಹವನ್ನು ಕೊಂಡೊಯ್ಯಲಾಗುತ್ತದೆ. ನಿವಾಸದಲ್ಲಿ ರಾತ್ರಿ 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಹುಟ್ಟೂರಾದ ತುಮಕೂರಿನ ತೊಂಡಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

RELATED ARTICLES
- Advertisment -spot_img

Most Popular