ಶಿಸ್ತಿನ ಪಕ್ಷದಲ್ಲಿ ಅಶಿಸ್ತು: ಪಕ್ಷದ ಕಚೇರಿಯಲ್ಲಿ ತುಂಡುಗುಂಡಿನ ಪಾರ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಸಕಲೇಶಪುರ: ಬಿಜೆಪಿ ಪಕ್ಷದ ಕೆಲವು ಮುಖಂಡರುಗಳು ಪಕ್ಷದ ಕಚೇರಿಯಲ್ಲಿ ತುಂಡುಗುಂಡು ಪಾರ್ಟಿ ಮಾಡುತ್ತಿರುವ ಹಳೆಯ ವಿಡಿಯೋವೊಂದನ್ನು ಪಕ್ಷದ ಪದಾಧಿಕಾರಿಯೊಬ್ಬರು ಬಿಡುಗಡೆ ಮಾಡುವ ಮೂಲಕ ಪಕ್ಷ ಸಾರ್ವಜನಿಕ ವಲಯದಲ್ಲಿ ಮುಜುಗರ ಅನುಭವಿಸುವಂತಾಗಿದೆ.
ವನಗೂರು ಉಚ್ಚಂಗಿ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ತಕ್ಷಣವೇ ಬಿಜೆಪಿ ಪಕ್ಷದ ಪ್ರಮುಖ ಪದಾಧಿಕಾರಿಗಳೇ ಪಕ್ಷದ ಕಚೇರಿಯಲ್ಲಿ ಕಳೆದ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವ ವಿಡಿಯೋವೊಂದು ಬಿಡುಗಡೆಯಾಗಿರುವುದು ಪಕ್ಷದ ಒಳಗಿನವರಿಗೆ ಮಾತ್ರವಲ್ಲ ವಿರೋಧ ಪಕ್ಷದ ಮುಖಂಡರಿಗೂ ಅಸ್ತ್ರವಾಗಿದೆ. ಕಳೆದ ದಕ್ಷಿಣ ಪಧವೀಧರರ ಚುನಾವಣೆ ಸಂಧರ್ಭದಲ್ಲಿ ಗುಂಡು ತುಂಡಿನ ಪಾರ್ಟಿಯಲ್ಲಿ ಭಾಗಿಯಾದ ಪಕ್ಷದ ಪದಾಧಿಕಾರಿಯೋರ್ವರೆ ಪಾರ್ಟಿಯಲ್ಲಿ ಭಾಗಿಯಾಗಿ ನಂತರ ವಿಡಿಯೋ ಮಾಡಿಕೊಂಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ. ಇದರಿಂದ ಶಿಸ್ತಿನ ಪಕ್ಷದಲ್ಲಿ ಅಶಿಸ್ತು ಉಂಟಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಪರಿಣಾಮ ಬೀಳುವ ಸಾಧ್ಯತೆಯಿದೆ. ಕೂಡಲೆ ಗುಂಡು ತುಂಡಿನ ಪಾರ್ಟಿಯಲ್ಲಿ ಬಾಗಿಯಾಗಿರುವ ಪಕ್ಷದ ಮುಖಂಡರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಬೇಕೆಂದು ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಪಕ್ಷಕ್ಕೂ ಮತ್ತು ಮುಖಂಡರಿಗೆ ಮುಜುಗರವಾಗಬಾರದು ಎಂಬ ಹಿನ್ನಲೆಯಲ್ಲಿ ವಿಡಿಯೋ ಮತ್ತು ಚಿತ್ರಗಳನ್ನು ಬ್ಲರ್ ಮಾಡಲಾಗಿದೆ. ವಾಸ್ತವ ಸುದ್ದಿಯ ಸಾಮಾಜಿಕ ಕಳಕಳಿ