ಸಕಲೇಶಪುರ:ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ನಿರಂತರವಾಗಿ ಪೋಲೀಸರಿಂದ ಮತ್ತು ಸಾರ್ವಜನಿಕರಿಂದ ದಬ್ಬಾಳಿಕೆ ಮತ್ತು ಹಲ್ಲೆ ಪ್ರಕರಣಗಳು ನಡೆಯುತಿದ್ದು, ಇದರಿಂದ ವಕೀಲರುಗಳಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿರುತ್ತದೆ. ಈಗಾಗಲೇ ವೈದ್ಯರ ರಿಗೆ ರಕ್ಷಣಾ ಕಾನೂನು ಜಾರಿ ಮಾಡಿರುವಂತೆ ವಕೀಲರಿಗೂ ಕೂಡ ರಕ್ಷಣಾ ಕಾಯಿದೆಯನ್ನು ಡಿಸೆಂಬರ್ 18 ರಂದು ನಡೆಯುವ ಅಧಿವೇಶನದಲ್ಲಿ ಮಂಡನೆ ಮಾಡಲು ಸರ್ಕಾರ ಮುಂದಾಗಬೇಕು.
ಈಗಾಗಲೇ ಕಾಯ್ದೆಯ ಅಂತಿಮ ಕರಡು ಕಾನೂನು ಇಲಾಖೆಯಲ್ಲಿರುತ್ತದೆ. ವಕೀಲರ ರಕ್ಷಣಾ ಮಸೂದೆಯನ್ನು ಜರೂರಾಗಿ ಮಂಡನೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲು ತಮ್ಮಲ್ಲಿ ವಿನಂತಿಸಲಾಗಿದೆ. ತಾವುಗಳು ಅತಿ ಜರೂರಾಗಿ ವಕೀಲರುಗಳ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದಬ್ಬಾಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ವಕೀಲರ ರಕ್ಷಣಾ ಮಸೂದೆಯನ್ನು ಜರೂರಾಗಿ ಮಂಡನೆ ಮಾಡಲು ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ತಾಲೂಕು ವಕೀಲರ ಸಂಘದ ವತಿಯಿಂದ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಪ್ರಕಾಶ್, ಕಾರ್ಯದರ್ಶಿ ವಾಣಿ, ವಕೀಲರುಗಳಾದ ಜ್ಯೋತಿ, ಅಕ್ರಂ ಪಾಷಾ, ಲಕ್ಷ್ಮೀನಾರಾಯಣ, ಷಣ್ಮುಖ, ಹೇಮಂತ್, ಪದ್ಮನಾಭ್, ಸುದೀಶ್, ಮುಂತಾದವರು ಹಾಜರಿದ್ದರು.