ಸಕಲೇಶಪುರ: ತಾಲ್ಲೂಕು ಕಾನೂನು ನೆರವು ಸೇವಾ ಪ್ರಾಧಿಕಾರ ಮತ್ತು ಗ್ರಾ. ಪಂ ಹಾನುಬಾಳು ಸಹಯೋಗದಲ್ಲಿ ಇಂದು ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.ಗ್ರಾ.ಪಂ ಅಧ್ಯಕ್ಷರಾದ ವಿಮಲ ರಾಜಯ್ಯನವರು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ವಕೀಲರಾದ ಮಹೇಶ್ ಹಾಗೂ ವಕೀಲರುಗಳಾದ ರಮೇಶ್, ಮಮತ,ಶೃತಿ ಯವರುಗಳು ಹಲವು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು, ಸಭೆಯಲ್ಲಿ ಸದಸ್ಯರಾದ ಮೋಹನ್ ಕುಮಾರ್ ಅಚ್ಚರಡಿ ಇವರು ಮಕ್ಕಳಿಗೆ ಮೊಬೈಲ್ ನಿಂದ ಆಗುವ ದುಷ್ಪರಿಣಾಮದ ಬಗ್ಗೆ ತಿಳಿಸಿದರು ಹಾಗೂ ವೆಂಕಟಹಳ್ಳಿ ಸದಸ್ಯರಾದ ಶ್ರೀ ಯೋಗೀಶ್ ಹಾಜರಿದ್ದರು, ಹಾನುಬಾಳುವಿನ ಎಲ್ಲಾ ಅಂಗನವಾಡಿ ಶಿಕ್ಷಕಿಯರು,ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು, ಹಾನುಬಾಳು ಪದವಿ ಪೂರ್ವ ಕಾಲೇಜು ಮಕ್ಕಳು ಹಾಜರಿದ್ದರು. ಸಹಾಯಕ ನಿರ್ದೇಶಕರು ಪಂ.ರಾಜ್ ಮತ್ತು ಪಿಡಿಓ ಹರೀಶ್ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿದರು. ಕಾರ್ಯದರ್ಶಿ ವೀಣಾ ಸ್ವಾಗತಿಸಿ,ವಂದಿಸಿದರು ಗ್ರಾಮಪಂಚಾಯಿತಿ ಸಿಬ್ಬಂದಿ ಹಾಜರಿದ್ದರು..