ಕಾಳು ಮೆಣಸು ಕೊಯ್ಯುವಾಗ ವಿದ್ಯುತ್ ಸ್ಪರ್ಶ: ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ
ಸಕಲೇಶಪುರ : ಕಾಫಿ ತೋಟದಲ್ಲಿ ಕಾಳು ಮೆಣಸು ಕೊಯ್ಯುವಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಹೊಂಕರವಳ್ಳಿ ಸಮೀಪದ ಕಾಫಿ ತೋಟದಲ್ಲಿ ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಇಸ್ಮಾಯಿಲ್ (44) ಕಾಳು ಮೆಣಸು ಬಿಡಿಸಲು ಅಲುಮಿನಿಯಂ ಏಣಿಯ ಸಹಾಯದಿಂದ ಮರ ಹತ್ತುವ ವೇಳೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಏಣಿ ಸ್ಪರ್ಶವಾಗಿದೆ. ಕಾರ್ಮಿಕ ಎಣಿಯ ಮೇಲೆ ಕಾಲು ಇರಿಸುತಿದ್ದಂತೆ ವಿದ್ಯುತ್ಪ್ರಶವಾಗಿ ಬಲಗಾಲಿಗೆ ತೀವ್ರ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಸಹಕಾರ್ಮಿಕರು ನೆರವಿಗೆ ಧಾವಿಸಿ ತುರ್ತು ಚಿಕಿತ್ಸ ವಾಹನದ ಮೂಲಕ ಹಾಸನದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಲೂರು ಸೆಸ್ಕ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.