Saturday, April 12, 2025
Homeಸುದ್ದಿಗಳುಸಕಲೇಶಪುರಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೋಟಿ ಕಂಠ ಗಾಯನ

ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೋಟಿ ಕಂಠ ಗಾಯನ

ಹೆತ್ತೂರು:-ಕನ್ಮಡಭಾಷೆ ಉಳಿವಿಗೆ ಎಲ್ಲಾರು ಕೈಜೋಡಿಸಬೇಕೆಂದು ಪ್ರಾಂಶುಪಾಲರಾದ ಮಂಜುನಾಥ ಕರೆ ನೀಡಿದರು.
ಹೆತ್ತೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ” ಕೋಟಿ ಕಂಠ ಗಾಯನ ” ಕಾರ್ಯಕ್ರಮದಲ್ಲಿ ಮಾತನಾಡಿ ಕರ್ನಾಟಕದ ಪ್ರಜೆಗಳಾದ ನಾವುಗಳು ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಿ,ಸಂಸ್ಕ್ರತಿ,ಪರಂಪರೆ ಉಳಿವಿಗೆ ಶ್ರಮಿಸಬೇಕು ಎಂದರು.

ಈ ಸಂಧರ್ಭದಲ್ಲಿ ಕುವೆಂಪುರವರ ಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ, ಹುಯಿಲಗೊಳ ನಾರಾಯಣರಾಯರ ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು, ಡಾ. ಡಿ ಎಸ್ ಕರ್ಕಿ ರವರ ಹಚ್ಚೇವು ಕನ್ನಡದ ದೀಪ, ನಾಡೋಜ ಚನ್ನವೀರ ಕಣವಿ ಯವರ ವಿಶ್ವ ವಿನೂತನ ವಿದ್ಯಾ ಚೇತನ ಹಾಗೂ ಡಾ. ಹಂಸ ಲೇಖ ರವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳ ಗಾಯನವನ್ನು ಹಾಡಲಾಯಿತು.

ಉಪ ಪ್ರಾಂಶುಪಾಲರಾದ ಲತಾ,ಶಿಕ್ಷರಾದ ಶೋಭಾ ಸತೀಶ್,ರಾಣಿ, ರೂಪ,ಉಪನ್ಯಾಸಕರಾದ ವೇದಾವತಿ,ಗಂಗಾಧರ್,ಮಂಜುಳ ಹಾಗೂ ವಿದ್ಯಾರ್ಥಿಗಳು ಇದ್ದರು.

RELATED ARTICLES
- Advertisment -spot_img

Most Popular