Sunday, November 24, 2024
Homeಸುದ್ದಿಗಳುಸಕಲೇಶಪುರಕಾಫಿ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೆ.ಜಿ.ಎಫ್ ಒತ್ತಾಯ

ಕಾಫಿ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೆ.ಜಿ.ಎಫ್ ಒತ್ತಾಯ

 

ಬೆಂಗಳೂರು:ಕೇಂದ್ರ ವಾಣೀಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್ ರವರು ಬೆಂಗಳೂರಿನ  ಕಾಫಿ ಮಂಡಳಿಯಲ್ಲಿ ಸ್ಟೇಕ್ ಹೋಲ್ಡರ್ಸ್  ಸಭೆ ನಡೆಸಿದರು .  ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾ .ಹೆಚ್ .ಟಿ .ಮೋಹನ್ ಕುಮಾರ್ ,ಸಂಘಟನಾ ಕಾರ್ಯದರ್ಶಿ  ಎ .ಎನ್ .ನಾಗಾರಾಜ್ ,ನಿರ್ದೇಶಕರಾದ ಶ್ರೀಬಿ .ಜಿ .ಯತೀಶ್ ಸಭೆಯಲ್ಲಿ ಭಾಗವಹಿಸಿ ಕೆಳಕಂಡ ಬೇಡಿಕೆಗಳನ್ನು ಮಂಡಿಸಿದರು.

1.ಬ್ಯಾಂಕುಗಳಲ್ಲಿನ ಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡುವುದು

2.ಸುಮಾರು ವರ್ಷಗಳಿಂದ ಅತಿರುಷ್ಟಿಯಿಂದ ಆರ್ಥಿಕ ಸಂಕಷ್ಟದಲ್ಲಿದ್ದು ಕಾಫಿಗೆ ವಿಶೇಷ ಪ್ಯಾಕೇಜ್ ನೀಡುವುದು .

  1. ಕಾಳುಮೆಣಸು ಮತ್ತು ಅಡಿಕೆಗೆ ಇರುವಂತೆ ಕಾಫಿ ಹವಾಮಾನದಾರಿತ ಬೆಳೆವಿಮೆ (ಇನ್ಸೂರೆನ್ಸ್ )ನ್ನು ಮಾಡುವುದು
  2. ಎನ್ .ಡಿ .ಆರ್ .ಎಫ್ .ಅಡಿಯಲ್ಲಿ ನೀಡುತ್ತಿರುವ ಪರಿಹಾರದ ಹಣ ಮತ್ತು ಎಕರೆಯನ್ನು ಹೆಚ್ಚುಪಡಿಸುವುದು .

5.ಮಾನವ ಮತ್ತು ಕಾಡಾನೆ ಸಂಘರ್ಷದಿಂದ ಕಾಫಿ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆದು ಶಾಶ್ವತ ಪರಿಹಾರ ದೊರಕಿಸಿಕೊಡುವುದು .

  1. ಕಾರ್ಬನ್ ಕ್ರೆಡಿಟ್ ಕಾಫಿ ಬೆಳೆಗಾರರಿಗೆ ತಲುಪಲು ಕೇಂದ್ರ ಸರ್ಕಾರದಿಂದ ಮಾಡಬೇಕು .
  2. ಸರ್ಫಾಸಿ ಆಕ್ಟ್ ನಿಂದ ಕಾಫಿ ಬೆಳೆಗಾರರನ್ನು ಹೊರಗಿಡುವುದು .

8.ಬ್ಯಾಂಕುಗಳಲ್ಲಿ ಸಿಬಿಲ್ ಸ್ಕೋರ್ ನ್ನು ಬೆಳೆಗಾರರಿಗೆ ಕಡಿಮೆ ಮಾಡಬೇಕು

 

RELATED ARTICLES
- Advertisment -spot_img

Most Popular