ಸಕಲೇಶಪುರ: ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಕೆಂಪೇಗೌಡ ಯುವಸೇನೆ ಟ್ರಸ್ಟ್ ವತಿಯಿಂದ ಆದಿಚುಂಚನಗಿರಿ ಮಠದ ದಿವಂಗತ ಬಾಲಗಂಗಧರನಾಥ ಸ್ವಾಮೀಜಿಗಳ ಪುಣ್ಯ ಸ್ಮರಣೆ ಅಂಗವಾಗಿ ಡಿ.ವೈ.ಎಸ್.ಪಿ ಮಿಥುನ್ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಾಮೀಜಿಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ನೂರಾರು ಮಂದಿಗೆ ಹಳೇಬಸ್ ನಿಲ್ದಾಣದಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್, ನಗರ ಘಟಕದ ಅಧ್ಯಕ್ಷ ಹೇಮಂತ್ ಗೌಡ, ಪ್ರಧಾನ ಕಾರ್ಯದರ್ಶಿ ಮಂಜುನಾಥ್,ಪದಾಧಿಕಾರಿಗಳಾದ ಕಿಟ್ಟಿಗೌಡ, ಸುಂಡೇಕೆರೆ ಮಧು, ವಿನಯ್, ರಘು ಮುಂತಾದವರು ಹಾಜರಿದ್ದರು.