ಪುರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಇಲಾಖೆಗೆ ಸಡ್ಡು ಹೊಡೆದ ಕರವೇ ಸ್ವಾಭಿಮಾನಿ ಸೇನೆಯ ಯುವ ಪಡೆ
ಸುಣ್ಣಬಣ್ಣ ಕಾಣದ ಹೇಮಾವತಿ ಸೇತುವೆಗೆ ಸುಣ್ಣ ಬಣ್ಣ ಬಳಿದ ಯುವ ಪಡೆ
ಸಕಲೇಶಪುರ: ಪಟ್ಟಣದ ಪ್ರವೇಶ ದ್ವಾರದಲ್ಲಿರುವ ಹೇಮಾವತಿ ಸೇತುವೆ ಬೆಂಗಳೂರು ಮಂಗಳೂರು ನಡುವಿನ ಸಂಪರ್ಕ ಕೊಂಡಿಯಾಗಿದ್ದು ದಿನನಿತ್ಯ ಸಾವಿರಾರು ಪ್ರಯಾಣಿಕರು ಈ ಮಾರ್ಗದಲ್ಲಿಯೇ ಸಂಚರಿಸುತ್ತಾರೆ. ಆದರೆ ಹೇಮಾವತಿ ಸೇತುವೆ ಸುಣ್ಣ ಬಣ್ಣ ಕಾಣದ ಕಾರಣ ಸೇತುವೆ ನೋಡುವ ಪರಿಸ್ಥಿತಿಯಲ್ಲಿ ಇಲ್ಲ.ಸೌಂದರ್ಯಕ್ಕೆ ಧಕ್ಕೆ ಉಂಟಾಗಿತ್ತು. ಹಲವು ಬಾರಿ ಪುರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರಿಗೆ ಕರವೇ ಸ್ವಾಭಿಮಾನಿ ಸೇನೆ ಹಾಗೂ ಇತರ ಸಂಘಟನೆಗಳ ವತಿಯಿಂದ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಪುರಸಭೆಯವರು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇತುವೆ ಸೇರುತ್ತದೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಇದು ಪುರಸಭೆಗೆ ಸೇರುತ್ತದೆ ಎಂದು ಸೇತುವೆಗೆ ಸುಣ್ಣಬಣ್ಣ ಮಾಡಿಸದೆ ಕಾಲ ಕಳೆದಿದ್ದರು. ಕಳೆದ ಒಂದು ವಾರದ ಹಿಂದೆ ಸೇತುವೆಗೆ ಸುಣ್ಣಬಣ್ಣ ಮಾಡಿಸುವಂತೆ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಪುರಸಭೆಗೆ ಮನವಿ ಮಾಡಲಾಗಿತ್ತು ಆದರೆ ಪುರಸಭೆ ಯಾವುದೇ ರೀತಿಯಲ್ಲಿ ಸ್ಪಂದನೆ ಮಾಡದ ಹಿನ್ನೆಲೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಜಾನೆಕೆರೆ ಸಾಗರ್ ಅವರ ನೇತೃತ್ವದಲ್ಲಿ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಸೇತುವೆಯನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಮಾಡಲು ಮುಂದಾಗಿದ್ದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ . ಈ ಸಂದರ್ಭದಲ್ಲಿ ಸಾಗರ ಜಾನೆಕೆರೆ ಮಾತನಾಡಿ ಪುರಸಭೆಯವರಿಗೆ ಸೊನ್ನ ಬಣ್ಣ ಮಾಡಸುವಂತ ಗುರುವಾರ ಅಂತಿಮ ಗಡವು ನೀಡಲಾಗಿತ್ತು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದ ಕಾರಣ ನಾವೇ ಸ್ವಯಂ ಪ್ರೇರಿತರಾಗಿ ಸೇತುವೆಗೆ ಸುಣ್ಣ ಬಣ್ಣ ಮಾಡಿಸಲು ಮುಂದಾಗಿದ್ದೇವೆ. ಹಲವು ಸಚಿವರು ಹಾಗೂ ಕ್ಷೇತ್ರದ ಶಾಸಕರು ಇದೇ ರಸ್ತೆಯ ಮೂಲಕ ತಿರುಗಾಡಿದರು ಸಹ ಸೇತುವೆಗೆ ಕನಿಷ್ಠ ಸುಣ್ಣ ಬಣ್ಣ ಮಾಡಿಸಲು ಮುಂದಾಗಿಲ್ಲ. ಸುಣ್ಣಬಣ್ಣ ಮಾಡಲು ನಮ್ಮ ಬಳಿ ಹಣ ಇಲ್ಲದ ಕಾರಣ ಕಾಂಗ್ರೆಸ್ ಮುಖಂಡ ಡಿ ಮಲ್ಲೇಶ್ ಅವರಿಗೆ ಮನವಿ ಮಾಡಿದಾಗ ಹಣ ಎಷ್ಟು ಬೇಕಾದರು ಖರ್ಚು ಆಗಲಿ ಸುಣ್ಣ ಬಣ್ಣಕ್ಕೆ ಬೇಕಾದ ಸಂಪೂರ್ಣ ಹಣವನ್ನು ನಾನು ಕೊಡುತ್ತೇನೆ ಎಂದು ಇದಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಅವರು ಕೊಡಿಸಿದ್ದಾರೆ ಎಂದರು.
ತಾಜಾ ಸುದ್ದಿ