ಜಾತ್ರೆಯಲ್ಲಿ ತಿಂಡಿ ತಿನುಸುಗಳಿಗೆ ಹಾಗೂ ಮನೋರಂಜನೆಗೆ ದರ ನಿಗದಿ ಮಾಡಲು ಕರವೇ ಪ್ರವೀಣ್ ಶೆಟ್ಟಿ ಬಣ ಆಗ್ರಹ
ಸಕಲೇಶಪುರ : ಮನರಂಜನೆ ಹಾಗೂ ತಿಂಡಿ-ತಿನಿಸುಗಳ ದರ ನಿಗದಿ ಮಾಡದೆ ಪುರಸಭೆಯವರು ಮುಂಬರುವ ಜಾತ್ರೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿದರೆ
ಕರವೇಯ ಪ್ರತಿಭಟನೆಯನ್ನು ಎದುರಿಸಬೇಕಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಹೇಳಿದರು.
ಪಟ್ಟಣದಲ್ಲಿ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿ ಕೆಲವರು ವೈಯುಕ್ತಿಕ ಪ್ರತಿಷ್ಠೆಗಾಗಿ ಹರಾಜಿನಲ್ಲಿ ಪಾಲ್ಗೊಂಡು ಅತಿ ಹೆಚ್ಚಿಗೆ ಹಣಕ್ಕೆ ಬಿಡ್ಡು ಕೂಗುತ್ತಾರೆ ಅದನ್ನು ಸರಿದೂಗಿಸಲು ಮನಸ್ಸೊ ಇಚ್ಚೆ ದರ ನಿಗದಿ ಮಾಡಿ ಜನಸಾಮಾನ್ಯರ ಮೇಲೆ ಹೇರುವ ಮೂಲಕ ಜನಸಾಮಾನ್ಯರು ಜಾತ್ರೆಗೆ ಬರಲು ಹಿಂದೇಟು ಹಾಕುವ ಸಾಧ್ಯತೆಗಳು ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಿಂದ ಕೆಲವರು ತಮ್ಮ ಪ್ರತಿಷ್ಠೆಗಾಗಿ ಜಾತ್ರೆಗಳನ್ನು ಕೂಗುತ್ತಿದ್ದು ಇದರಿಂದ ಜಾತ್ರೆಯಲ್ಲಿ ಪ್ರತಿಯೊಂದು ವಸ್ತುಗಳ ಹಾಗೂ ಮನರಂಜನೆಯ ದರವನ್ನು ಹೆಚ್ಚು ನಿಗದಿಪಡಿಸುವುದರಿಂದ ಜನಸಾಮಾನ್ಯನ ಕೈಗೆಟುಕುತ್ತಿಲ್ಲ ಈ ಕಾರಣಕ್ಕಾಗಿ ಟೆಂಡರ್ ಮಾಡುವ ಮೊದಲೇ ಪುರಸಭೆಯವರು ಪ್ರತಿ ವಸ್ತುವಿಗೂ ಹಾಗೂ ಕಾರ್ಯಕ್ರಮಕ್ಕೂ ಇಂತಿಷ್ಟು ಹಣವನ್ನು ಮೊದಲು ನಿಗದಿಪಡಿಸಿದ ನಂತರ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಇಲ್ಲವಾದ ಪಕ್ಷದಲ್ಲಿ ಸ್ಥಳದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಪ್ರತಿರೋಧ ಮಾಡಲಿದೆ ಎಂದು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಸಂಘಟನೆ ಮುಖಂಡರುಗಳಾದ ರಾಜೇಶ್,ಲಕ್ಷ್ಮಣ್, ಉಮೇಶ್ ಸೇರಿದಂತೆ ಇತರರು ಹಾಜರಿದ್ದರು.