ಆಲೂರು : ಕಾನೂನಿನ ತಿಳುವಳಿಕೆ ಇಲ್ಲದೇ ಜನ ಹಲವು ಸಮಸ್ಯೆಗಳಿಗೆ ಒಳಗಾಗಿ ಅದರಿಂದ ಸೂಕ್ತ ಪರಿಹಾರ ಇಲ್ಲದೆ ನರಳುತ್ತಿದ್ದಾರೆ ಅದುದರಿಂದ ಪ್ರತಿಯೊಬ್ಬರಿಗೂ ಕಾನೂನಿನ ಜ್ಞಾನ ಬರಬೇಕಾದರೆ ಕಾನೂನು ವಿಷಯವನ್ನು ಪಠ್ಯದಲ್ಲಿ ಅಳವಡಿಸಿ ಶಿಕ್ಷಣದ ಭಾಗವಾಗಿಸಬೇಕು ಎಂದು ಜೆಎಂಎಫ್ ಸಿ ನ್ಯಾಯಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸದಸ್ಯ ಕಾರ್ಯದರ್ಶಿ ಎಂ.ಸಿ.ನಿರ್ಮಲಾ ತಿಳಿಸಿದರು.
ತಾಲೂಕ ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿನ್ನೇನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಕಾನೂನು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೇಶದ ಪ್ರತಿಯೊಬ್ಬ ಸಾಮಾನ್ಯ ಜನರಿಗೂ ಕಾನೂನಿನ ಅರಿವು ಅಗತ್ಯವಾಗಿದೆ ಜನಸಾಮಾನ್ಯರು ಕಾನೂನುಗಳನ್ನು ಪಾಲನೆ ಮಾಡಬೇಕು ತಮ್ಮ ದಿನನಿತ್ಯದ ಜೀವನದಲ್ಲಿ ಕಾನೂನು ಬಹಳ ಮುಖ್ಯವಾಗಿದೆ ಪ್ರತಿಯೊಬ್ಬರ ಜೀವನದಲ್ಲಿ ಪ್ರತಿಯೊಬ್ಬ ಮಕ್ಕಳು ಶಿಕ್ಷಣವನ್ನು ಕಲಿಯಬೇಕು ಅಂದಾಗ ಮಕ್ಕಳಲ್ಲಿ ಕೌಶಲ್ಯ ಬೆಳೆಯುತ್ತದೆ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಾತಾವರಣವಿದ್ದು ಗುಣಮಟ್ಟದ ಕಲಿಕೆ ಇದೆ ಕನ್ನಡ ಮಾದ್ಯಮವನ್ನು ತಾತ್ಸಾರ ಮನೋಭಾವನೆಯಿಂದ ನೋಡಲಾಗುತ್ತಿದೆ ನಾನು ಕೂಡ ಕನ್ನಡ ಮಾದ್ಯಮದಲ್ಲಿಯೇ ವ್ಯಾಸಂಗ ಮಾಡಿದ್ದು ಚಿನ್ನೇನಹಳ್ಳಿ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಹೆಚ್.ಡಿ.ಮಧು ಮಾತನಾಡಿ ಒಬ್ಬ ವ್ಯಕ್ತಿ ಹುಟ್ಟಿನಿಂದಲೇ ಅವನಿಗೆ ಕಾನೂನು ಆರಂಭವಾಗುತ್ತದೆ ಕೊನೆಗೆ ವ್ಯಕ್ತಿ ಸತ್ತಾಗಲೂ ಕಾನೂನು ಬಹಳ ಮುಖ್ಯವಾಗುತ್ತದೆ,ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಬಾರದು ಲೋಕ ಅಧಾಲತ್ ನಿಂದ ಸಮಯ ಮತ್ತು ಹಣ ಉಳಿತಾಯವಾಗುವುದರ ಜೊತೆಗೆ ಶೀಘ್ರವಾಗಿ ನ್ಯಾಯ ಇಥ್ಯರ್ಥವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಎ.ಟಿ.ಮಲ್ಲೇಶ್ ಉಚಿತ ಕಾನೂನು ನೆರವು ಕಾರ್ಯಕ್ರಮ ದಿಂದ ಎಲ್ಲರೂ ಕಾನೂನಿಗೆ ಭಯ ಪಡದೆ ಕಾನೂನುಗಳನ್ನು ಗೌರವಿಸಿ ತಪ್ಪುಗಳನ್ನು ಮಾಡದಂತೆ ಸಮಾಜದಲ್ಲಿ ಸಹಬಾಳ್ವೆಯಿಂದ ಬದಕುವ ವಾತಾವರಣ ನಿರ್ಮಾಣವಾಗಬೇಕು ಎಂದರು.
ಹಿರಿಯ ವಕೀಲ ಕೆ.ಜಿ.ನಾಗರಾಜ್ ಮಾತನಾಡಿ ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಡ್ರೈವಿಂಗ್ ಪರವಾನಗಿ ಪಡೆದು ವಾಹನ ಚಲಾಯಿಸಬೇಕು ಮತ್ತು ಕಾನೂನು ಪಾಲಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎ.ಟ.ಮಲ್ಲೇಶ್,ವಕೀಲರ ಸಂಘದ ಅಧ್ಯಕ್ಷ ಹೆಚ್.ಡಿ.ಮಧು,ಕೆ.ಜಿ.ನಾಗರಾಜ್,ಎಸ್ಡಿ ಎಂಸಿ ಅಧ್ಯಕ್ಷ ಜಗದೀಶ್,ಪ್ರೌಢಶಾಲಾ ಮುಖ್ಯ ಶಿಕ್ಷಕ ಗಂಗಪ್ಪ,ಹಿರಿಯ ವಕೀಲರಾದ ಸಂದೀಪ್,ಶಿವರಾಜ್,ಶಾಲಾ ಶಿಕ್ಷಕರಾದ ಗಂಗಾಧರ್,ನಾಗರಾಜ್,ಹಾಲಪ್ಪ,ಹಾಗೂ ಮುಂತಾದವರು ಉಪಸ್ಥಿತರಿದ್ದರು.