Saturday, November 23, 2024
Homeಸುದ್ದಿಗಳುಕಾಂತಾರ' ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ! –

ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ! –

 

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ, ರಿಷಬ್ ಶೆಟ್ಟಿ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ‘ಕಾಂತಾರ’ ಸಿನಿಮಾ, ದಿನೇದಿನೆ ಭಾರಿ ಮೆಚ್ಚುಗೆ ಗಳಿಸುತ್ತಿರುವುದು ಮಾತ್ರವಲ್ಲದೆ, ಹೌಸ್​ಫುಲ್​ ಪ್ರದರ್ಶನವನ್ನೂ ಕಾಣುತ್ತಿದೆ. ಅಷ್ಟೇ ಅಲ್ಲ, ಹಲವು ಪ್ರಥಮಗಳಿಗೆ ಪಾತ್ರವಾಗುತ್ತಿರುವ ಈ ಚಿತ್ರ ಇದೀಗ ಮತ್ತೊಂದು ದಾಖಲೆಗೂ ಭಾಜನವಾಗಿದೆ.

ನಿನ್ನೆಯಷ್ಟೇ ಮುಂಬೈನಲ್ಲಿ ಎರಡು ಪ್ರಥಮಗಳ ಗರಿಯನ್ನು ಮುಡಿಗೇರಿಸಿಕೊಂಡ ಕಾಂತಾರ, ಇಂದು ಇನ್ನೊಂದು ಪ್ರಥಮಕ್ಕೂ ಪಾತ್ರವಾಗಿದೆ. ಮುಂಬೈನ ಮರಾಠ ಚಿತ್ರಮಂದಿರಲ್ಲಿ ಇದುವರೆಗೆ ದಕ್ಷಿಣ ಭಾರತದ ಯಾವುದೇ ಸಿನಿಮಾ ಹಿಂದಿಗೆ ಡಬ್ಬಿಂಗ್ ಆಗದೆ ಪ್ರದರ್ಶನಗೊಂಡಿಲ್ಲ. ಆದರೆ ‘ಕಾಂತಾರ’ ಇಲ್ಲಿ ಡಬ್ಬಿಂಗ್ ಆಗದೇ ಪ್ರದರ್ಶನಗೊಳ್ಳುವ ಮೂಲಕ ಈ ಚಿತ್ರಮಂದಿರದಲ್ಲಿ ಹಿಂದಿಗೆ ಡಬ್ಬಿಂಗ್​ ಆಗದೆ ನೇರವಾಗಿ ಪ್ರದರ್ಶನಗೊಂಡ ಪ್ರಪ್ರಥಮ ದಕ್ಷಿಣ ಭಾರತೀಯ ಸಿನಿಮಾ ಎಂದೆನಿಸಿಕೊಂಡಿದೆ. ಇದನ್ನು ಮರಾಠ ಮಂದಿರ್​​ನ ಕಾರ್ಯಕಾರಿ ನಿರ್ದೇಶಕ ಮನೋಜ್ ದೇಸಾಯಿ ಹೇಳಿಕೊಂಡಿದ್ದಾರೆ. ಅಲ್ಲದೆ ಮುಂಬೈನಲ್ಲಿ ‘ಕಾಂತಾರ’ಗೆ ಇಂದು ನೂರಕ್ಕೂ ಅಧಿಕ ಶೋಗಳು ಸಿಕ್ಕಿದ್ದು, ಇನ್ನಷ್ಟು ಸೇರ್ಪಡೆಯಾಗುವ ಲಕ್ಷಣಗಳಿವೆ. ಹೀಗೆ ನೂರಕ್ಕೂ ಅಧಿಕ ಪ್ರದರ್ಶನಗಳಿಗೆ ಅವಕಾಶ ಸಿಕ್ಕ ಮೊದಲ ಕನ್ನಡ ಸಿನಿಮಾ ‘ಕಾಂತಾರ’ ಎಂಬುದಾಗಿ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ನಿನ್ನೆ ಹೇಳಿಕೊಂಡಿದ್ದರು. ಇಂದು ಅವರು ಮತ್ತೊಂದು ಸಂಗತಿಯನ್ನು ಹೇಳಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡದ ಹಲವು ಸಿನಿಮಾಗಳು ಹಿಂದಿಗೆ ಡಬ್ಬಿಂಗ್ ಆಗಿ ಉತ್ತರಭಾರತದಲ್ಲಿ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನ ಕಂಡಿದ್ದು ಕೂಡ ಇದೆ. ಆದರೆ ಈಗ ಕಾಂತಾರ ಕನ್ನಡದಲ್ಲೇ ಉತ್ತರ ಭಾರತದಲ್ಲಿ ಪ್ರದರ್ಶನ ಕಾಣುತ್ತಿರುವುದಷ್ಟೇ ಅಲ್ಲ, ಅದ್ಭುತ ಎನ್ನುವಂಥ ಗಳಿಕೆಯನ್ನು ಪಡೆಯುತ್ತಿದೆ. ಉತ್ತರಭಾರತದಲ್ಲಿ ಇದುವರೆಗೆ ಕನ್ನಡದಲ್ಲೇ ಪ್ರದರ್ಶನಗೊಂಡು ಅತ್ಯಧಿಕ ಗಳಿಕೆ ಕಂಡ ಕನ್ನಡ ಸಿನಿಮಾ ಎಂಬ ಖ್ಯಾತಿಗೆ ಈಗ ‘ಕಾಂತಾರ’ ಪಾತ್ರವಾಗಿದೆ ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.

RELATED ARTICLES
- Advertisment -spot_img

Most Popular