ಸಕಲೇಶಪುರ: ನಾಡು ನುಡಿ ರಕ್ಷಣೆಯಲ್ಲಿ ಕನ್ನಡ ಪರ ಸಂಘಟನೆಗಳು ಪ್ರಮುಖ ಪಾತ್ರವಹಿಸಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಬೆಳಗೋಡು ಹೋಬಳಿ ಕರವೇ ನಾರಾಯಣ ಗೌಡ ಬಣದ ನೂತನ ಘಟಕದ ಉದ್ಘಾಟನೆಯನ್ನು ನೆರವೇರಿಸಿದ ಮಾತನಾಡಿ ನಾಡಿನ ನೆಲ, ಜಲ, ಸಂರಕ್ಷಣೆಯ ವಿಷಯಕ್ಕೆ ಬಂದಾಗ ಕನ್ನಡ ಪರ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಬೇಕು. ಇಂದು ಕನ್ನಡ ಪರ ಸಂಘಟನೆಗಳು ಇಲ್ಲದಿದ್ದಲ್ಲಿ ಬೆಳಗಾವಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳು ನಮ್ಮ ಕೈತಪ್ಪಿ ಹೋಗುತ್ತಿದ್ದವು. ಆದರೆ ಕನ್ನಡ ಪರ ಸಂಘಟನೆಗಳಿಂದ ಅಖಂಡ ಕರ್ನಾಟಕ ಉಳಿಯಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮ ದಲ್ಲಿ ತಾಲೂಕು ಅಧ್ಯಕ್ಷ ದಿನೇಶ್, ಗೌರವ ಅಧ್ಯಕ್ಷ ಎಡೇಹಳ್ಳಿ ಮಂಜುನಾಥ್, ನೂತನ ಬೆಳಗೋಡು ಹೋಬಳಿ ಘಟಕದ ಅಧ್ಯಕ್ಷ ಆರ್. ಎಲ್ ದೇವರಾಜ್, ಆಲೂರು ತಾಲ್ಲೂಕು ಅಧ್ಯಕ್ಷ ನಟರಾಜ್, ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಬೆಳಗೋಡು ಹೋಬಳಿ ಘಟಕದ ಸಮಾಜಿಕ ಜಾಲತಾಣದ ದುಷ್ಯಂತ ಮೂಗಲಿ, ಜೆಡಿಎಸ್ ತಾ ಅಧ್ಯಕ್ಷ ದೊಡ್ಡದಿಣ್ಣೆ ಸ್ವಾಮಿ ಗೌಡ, ಸಮಾಜ ಸೇವಕರಾದ ಜಯಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.