ಸಕಲೇಶಪುರ. ರಥಸಪ್ತಮಿ ಅಂಗವಾಗಿ ಯೋಗ ಚೇತನ ಟ್ರಸ್ಟ್ ವತಿಯಿಂದಿ ಇಂದು 108 ಸೂರ್ಯ ನಮಸ್ಕಾರ ಮಾಡಿದರು.
ಪಟ್ಟಣದ ಶ್ರೀನಿವಾಸ ಕನ್ವೆನ್ಷನ್ ಹಾಲ್ ಮುಂಬಾಗ ಶನಿವಾರ ಮುಂಜಾನೆ 5.30 ಕ್ಕೆ ಎಲ್ಲಾ ಯೋಗ ಬಂಧುಗಳು ಚಳಿ ಹಾಗು ಇಬ್ಬನಿಯ ನಡುವೆ ಉಲ್ಲಾಸದಿಂದ 108 ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಜೆ ಎಸ್ ಎಸ್ ಬಿಎಡ್ ಕಾಲೇಜಿನ ಉಪನ್ಯಾಸಕರಾದ ಪ್ರೋ ದಿನೇಶ್ ರವರು ಮಾತನಾಡಿ ರಥಸಪ್ತಮಿ ದಿನ ಆಚರಣೆಯ ಮಹತ್ವ ಬಗ್ಗೆ ಮಾಹಿತಿ ನೀಡಿದರು. ಯೋಗ ಚೇತನ ಟ್ರಸ್ಟ್ ವತಿಯಿಂದ ಪ್ರತಿವರ್ಷ ರಥಸಪ್ತಮಿ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಿಕೊಂಡು ಬರುತಿದ್ದಾರೆ . ಈ ಸಂದರ್ಭದಲ್ಲಿ ಯೋಗ ಚೇತನ ಟ್ರಸ್ಟ್ ನ ಅಧ್ಯಕ್ಷ ಲಕ್ಷ್ಮೀ ರಂಗನಾಥ, ಕಾರ್ಯದರ್ಶಿ ಜಗದೀಶ್, ಲಕ್ಷ್ಮಣ ಕಿರ್ತಿ ಉಪಾಧ್ಯಕ್ಷ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.